ಉಪ್ಪಿನಂಗಡಿ: ರಾಜ್ಯ ಪೈಝೀಸ್ ವತಿಯಿಂದ ನಡೆಯುವ ಮಾಸ ಪೂರ್ತಿ ರಬೀಹ್ ಕ್ಯಾಂಪೈನ್ ಉದ್ಘಾಟನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕರಾಯ, ಅ. 20. ಪೈಝಿ ಉಲಮಾಗಳ ಪ್ರತಿಷ್ಟಿತ ಸಂಘಟನೆ ಪೈಝೀಸ್ ಅಸೋಶಿಯೇಶನ್ ಇದರ ರಾಜ್ಯ ಘಟಕದ ವತಿಯಿಂದ ತಿಂಗಳು ಪೂರ್ತಿ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಮೀಲಾದ್ ಪ್ರಯುಕ್ತ “ಸಮಕಾಲೀ‌ನ ಸಮಸ್ಯೆಗೆ ಪ್ರವಾದಿ ಚರ್ಯೆಯಲ್ಲಿ ಪರಿಹಾರ” ಎಂಬ ಪ್ರಮೇಯದೊಂದಿಗೆ ಹಮ್ಮಿಕೊಳ್ಳಲಾದ ರಬೀಅ್ ಕ್ಯಾಂಪಯಿನ್ ಇದರ ಉದ್ಘಾಟನಾ ಕಾರ್ಯಕ್ರಮವು ಉಪ್ಪಿನಂಗಡಿಯ ಕರಾಯ ಮಸೀದಿ ವಠಾರದಲ್ಲಿ ಅದ್ದೂರಿಯಾಗಿ ಜರಗಿತು.


ಜಿಲ್ಲೆ ಕಂಡ ಶ್ರೇಷ್ಡ ಪಂಡಿತರೂ ಮುಸ್ಲಿಮರ ಅಭಿಮಾನದ ಕೇಂದ್ರ ಉಳ್ಳಾಲ ಸಯ್ಯಿದ್ ಮದನಿ ಅರಬಿಕ್ ಕಾಲೇಜು ಇದರ ಪ್ರಾಂಶುಪಾಲರೂ ಆದ ಶೈಖುನಾ ಉಸ್ಮಾನ್ ಪೈಝಿ ಯವರ ಸಾರಥ್ಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮುನ್ನುಗ್ಗುತ್ತಿರುವ ಪೈಝೀಸ್ ರಾಜ್ಯ ಘಟಕವು, ಈಗಾಗಲೇ ರಾಜ್ಯದ ಜನತೆಯ ಮನಗೆದ್ದು ಜನರ ಪ್ರಶಂಸೆಗೆ ಪಾತ್ರವಾಗಿದ್ದು ಉಲ್ಲೇಖನೀಯ. ಶ್ರೀಯುತರ ಅದ್ಯಕ್ಷತೆಯಲ್ಲಿ ನಡೆದ ಸದ್ರಿ ಕಾರ್ಯಕ್ರಮವನ್ನು ಸಯ್ಯಿದ್ ಪೂಕೋಯ ತಂಙಳ್ ಪುತ್ತೂರು ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು ವಿದ್ಯೆ ದೊರಕಿದರೆ ಸಾಲದು, ಅದರೊಂದಿಗೆ ಸಂಸ್ಕಾರವೂ ಲಭಿಸಬೇಕು. ಪ್ರವಾದಿಯವರು ಈ ಎರಡನ್ನೂ ಜನರಿಗೆ ನೀಡಿ ಉತ್ತಮ ಸಮಾಜವನ್ನು ನಿರ್ಮಿಸಿದರು ಎಂದು ಅಭಿಪ್ರಾಯಪಟ್ಟರು. ಪ್ರಾರ್ಥನೆಗೆ ಆತೂರು ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಆತೂರು ನೇತೃತ್ವ ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಇಂದಿನ ಕಲುಷಿತ ಜಗತ್ತಿನಲ್ಲಿ ಹಲವು ಸಮಸ್ಯೆಗಳು ಉಲ್ಭಣವಾಗುತ್ತಿದೆ. ಇದಕ್ಕೆ ನೆಬಿ ಚರ್ಯೆಯಲ್ಲಿ ಪರಿಹಾರ ಇದೆ ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಭಾಷಣಗೈದ ಉಸ್ತಾದ್ ಎಸ್.ಬಿ ದಾರಿಮಿ ಮಾತನಾಡಿ, ಜಾಮಿಅ ಪಟ್ಟಿಕಾಡ್ ಸಂಸ್ಥೆ ಇಂದು ಶ್ರೇಷ್ಟ ವಿದ್ಯಾಕೇಂದ್ರವಾಗಿ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗಕ್ಕಾಗಿ ಅಲ್ಲಿಗೆ ತೆರಳುತ್ತಿದ್ದು, ಪೂರ್ವಿಕ ಉಲಮಾಗಳು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಆರಂಭಿಸಿದ ಈ ಅರೇಬಿಕ್ ಕಾಲೇಜು ಇತರ ಸಂಸ್ಥೆಗಳ ಮಾತೃ ಸ್ಥಾನದಲ್ಲಿ ನಿಲ್ಲುತ್ತದೆ ಎಂದರಲ್ಲದೇ, ಕಾಲದ ಬೇಡಿಕೆಗೆ ಸ್ಪಂದಿಸಿ ದ-ಅ್ ವಾ ಕ್ಷೇತ್ರದಲ್ಲಿ ಬದಲಾವಣೆಯ ಹಾದಿಯನ್ನು ಮೈಗೂಡಿಸಿಕೊಂಡರೆ ಯಶಸ್ಸು ಸಾದ್ಯ ಎಂದರು. ಸ್ಥಳೀಯ ಮುದರ್ರಿಸ್ ಹೈದರ್ ದಾರಿಮಿ, ತಬೀಬ್ ಹಬೀಬುರ್ರಹ್ಮಾನ್ ತಂಙಳ್, ಇಸ್ಮಾಯಿಲ್ ಪೈಝಿ ಸೂರಿಂಜೆ, ಶರೀಫ್ ಪೈಝಿ ಕಡಬ, ಶುಕೂರ್ ದಾರಿಮಿ ಕರಾಯ, ಲತೀಫ್ ಫೈಝಿ ಮೊದಲಾದವರು ಮಾತನಾಡಿದರು.


ಇ.ಕೆ.ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಕರಾಯ, ರೈಟರ್ ಅಬ್ದುಲ್ ಖಾದರ್ ಹಾಜಿ, ಹಾರಿಸ್ ಕೌಸರಿ, ಅಶ್ರಫ್ ಹನೀಫಿ, ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ದಾವೂದ್ ಮುಸ್ಲಿಯಾರ್, ಯಾಕೂಬ್ ಫೈಝಿ, ಶರೀಫ್ ಫೈಝಿ, ರಿಯಾಝ್ ಮೌಲವಿ ಮಾಪಾಲ್, ಕೆ.ಯಚ್. ಲತೀಫ್, ಸಾಬಿತ್ ಕಾಟ್ರಾಸ್, ಇ.ಕೆ. ಲತೀಫ್ ಮೊದಲಾದವರು ಉಪಸ್ಥಿತರಿದ್ದರು. ವರ್ಕಿಂಗ್ ಕಾರ್ಯದರ್ಶಿ ಸಿದ್ದೀಖ್ ಪೈಝಿ ಕರಾಯ ಸ್ವಾಗತಿಸಿದರು. ಅಬ್ದುಲ್ ಅಝೀಝ್ ಫೈಝಿ ವಂದಿಸಿದರು. ಬಿಶ್ರ್ ಕರಾಯ ಹಾಗೂ ಸಿನಾನ್ ಕಾರ್ಯಕ್ರಮ ನಿರ್ವಹಿಸಿದರು.

error: Content is protected !!

Join the Group

Join WhatsApp Group