(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.20: ರೈಲಿನಲ್ಲಿ 1.3 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಬಂಧಿಸಲು ಬೆಂಗಳೂರು ಪೊಲೀಸರು ವಿಮಾನದಲ್ಲಿ ಹೋಗಿರುವ ಅಪರೂಪದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೂಲತಃ ಪಶ್ಚಿಮ ಬಂಗಾಳದ ಬುರ್ದ್ವಾನ್ನ ಆರೋಪಿ ಎಂದು ಗುರುತಿಸಲಾಗಿದೆ.
ಇದೊಂದು ರೀತಿಯಲ್ಲಿ ಅಸಾಮಾನ್ಯ ಘಟನೆ ಎಂದೇ ಹೇಳಬಹುದು. ಏಕೆಂದರೆ, ಕಳ್ಳನ ಸುದ್ದಿ ತಿಳಿಯುತ್ತಿದ್ದಂತೆಯೇ ಆತ ಸುಲಭದಲ್ಲಿ ಸಿಗುವುದಿಲ್ಲ ಎಂದು ತಿಳಿದ ಪೊಲೀಸರ ಯೋಜನೆಯಿಂದಾಗಿ ಕಳ್ಳ ಅಂತೂ ಸಿಕ್ಕಿಬಿದ್ದಿದ್ದಾನೆ. ವಿಮಾನದಲ್ಲಿ ಹಾರಿದ ಪೊಲೀಸರು ರೈಲಿಗಿಂತ ಮುಂಚಿತವಾಗಿ ಹೌರಾವನ್ನು ತಲುಪುವ ಮೂಲಕ ರೈಲನ್ನು ಕಾದು, ಕಳ್ಳನನ್ನು ಹಿಡಿದಿದ್ದಾರೆ. ಆರೋಪಿ ಬೆಂಗಳೂರಿನ ಬಿಲ್ಡರ್ ಮನೆಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಈ ಕಳ್ಳನಿಗೆ ಅವರು ನೆಲಮಾಳಿಗೆಯಲ್ಲಿಯೇ ಮನೆ ಕೊಟ್ಟಿದ್ದರು. ಮನೆ ಮಾಲೀಕರಿಗೆ ಕರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಪರೀಕ್ಷೆಗೆಂದು ಹೋಗಿದ್ದರು. ನಿಶ್ಚಿಂತೆಯಿಂದ ಕನಸು ಕಾಣುತ್ತಿದ್ದ ಕಳ್ಳನನ್ನು ಅಲ್ಲಿಯೇ ಬಂಧಿಸಿದ ಪೊಲೀಸರು ಆತನ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.