ಬೆಳ್ತಂಗಡಿ: ಪಿಎಫ್ಐ ಹಾಗೂ ಕಮ್ಯೂನಿಟಿ ಡೆವಲಪ್‌ ಮೆಂಟ್ ವಾಟ್ಸಾಪ್ ಗ್ರೂಪ್ ವತಿಯಿಂದ ಮನೆ ಹಸ್ತಾಂತರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ. 20. ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್ ಕೆರೆ ಎಂಬಲ್ಲಿ ಸೂರಿಲ್ಲದೆ ಬಹಳ ಕಷ್ಟದಿಂದ ವಾಸಿಸುತ್ತಿದ್ದ ಬಡಕುಟುಂಬವೊಂದಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ, ಕಮ್ಯೂನಿಟಿ ಡೆವಲಪ್ಮೆಂಟ್ ವಾಟ್ಸಾಪ್ ಗ್ರೂಪ್ ಹಾಗೂ ಊರ ದಾನಿಗಳ ಸಹಾಯದಿಂದ ನೂತನವಾಗಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮವು ಸುನ್ನತ್ ಕೆರೆಯಲ್ಲಿ ನಡೆಯಿತು.

ಇದರ ಉದ್ಘಾಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಸಮಿತಿ ಸದಸ್ಯರಾದ ಕೆ.ಎಂ. ಶರೀಫ್ ಸಾಬ್ ರವರು ನೆರವೇರಿಸಿ ಮನೆಯ ಕೀಲಿ ಕೈಯನ್ನು ಹಸ್ತಾಂತರಿಸಿದರು.

ಸ್ಥಳೀಯ ಖತೀಬರಾದ ಬಹು! ಅಬ್ದುಲ್ ಕರೀಂ ಸಅದಿ ದುವಾ ನೇತೃತ್ವವನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಮುಸ್ತಫಾ ಜಿ.ಕೆ, ಝೋನಲ್ ಅಧ್ಯಕ್ಷರಾದ ಇಕ್ಬಾಲ್ ಬಳ್ಳಮಂಜ, ಜಮಾಅತ್ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಪಿ ಎಫ್ ಐ ವೇಣೂರ್ ಡಿವಿಷನ್ ಅಧ್ಯಕ್ಷರಾದ ದಾವೂದ್ ಜಿ ಕೆ, ಪಿ ಎಫ್ ಐ ಕಾರ್ಯಕರ್ತರು, ಸಾರ್ವಜನಿಕರು ಹಾಗೂ ಕಮ್ಯುನಿಟಿ ಡೆವಲಪ್ಮೆಂಟ್ ವಾಟ್ಸಪ್ ಗ್ರೂಪಿನ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಿ ಎಫ್ ಐ ಜಿಲ್ಲಾ ಕಾರ್ಯದರ್ಶಿ ತ್ವಾಹಿರ್ ಇಂಜಿನಿಯರ್ ನಿರೂಪಿಸಿ, ವಂದಿಸಿದರು.

Also Read  ಕೊಂಬಾರು: ಕಾಡಾನೆ ದಾಳಿ- ಕೃಷಿ ಹಾನಿ

error: Content is protected !!
Scroll to Top