ಬಜ್ಪೆ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಆರ್ಕೊ ಮೈದಾನದಲ್ಲಿ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಬಜ್ಪೆ, ಅ.19: ಕ್ಯಾಂಪಸ್‌ ಫ್ರಂಟ್‌ ಆಫ್‌ ಇದರ ವತಿಯಿಂದ ಬಜ್ಪೆ ಆಸುಪಾಸಿನ ವಿದ್ಯಾರ್ಥಿಗಳಿಗೆ ಆರ್ಕೋ ಮೈದಾನದಲ್ಲಿ ಕ್ರೀಡಾಕೂಟ ಏರ್ಪಡಿಸಲಾಯಿತು. ಕ್ಯಾಂಪಸ್‌ ಫ್ರಂಟ್‌ ಮಂಗಳೂರು ಜಿಲ್ಲಾ ಕೋಶಾಧಿಕಾರಿ ಶರ್ಫುದ್ದೀನ್‌ ಹಾಗೂ ಜಿಲ್ಲಾ ಸಮೀತಿ ಸದಸ್ಯ ಫಾರೀಶ್‌ ಧ್ವಜ ಹಸ್ತಾಂತರಿಸುವ ಮೂಲಕ ಕ್ರೀಡಾ ಕೂಟವನ್ನು ಉದ್ಘಾಟಿಸಿದರು.

 

ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ರಿಲೆ, ಮಿಲಿಟರಿ ಓಟ, ಹಗ್ಗ ಜಗ್ಗಾಟ, ಕ್ವಿಝ್‌, ಜ್ಞಾನದ ಪರೀಕ್ಷೆ ಮುಂತಾದ ಆಟದ ಮೂಲಕ ವಿದ್ಯಾರ್ಥಿಗಳು ಮನರಂಜನೆ ಪಡೆದರು. ಈ ಸಂದರ್ಭದಲ್ಲಿ ಕ್ಯಾಂಪಸ್‌ ಫ್ರಂಟ್‌ ಮಂಗಳೂರು ಜಿಲ್ಲಾ ಕೋಶಾಧಿಕಾರಿ ಶರ್ಫುದ್ದೀನ್‌ ಕೊಳಂಬೆ, ಜಿಲ್ಲಾ ಸಮೀತಿ ಸದಸ್ಯ ಫಾರೀಶ್‌ ಸೂರಲ್ಪಾಡಿ, ಬಜ್ಪೆ ಯುನೀಟ್‌ ಅಧ್ಯಕ್ಷ ಶಿಫಾನ್‌, ಸದಸ್ಯರಾದ ಮಹಾಝ್‌, ಸಹೀದ್‌, ಅಸದ್‌, ಅಫ್ತಾಬ್‌, ಶುಹೈಬ್‌ ಮುಂತಾದವರು ಉಪಸ್ಥಿತರಿದ್ದರು.

Also Read  ಡೀಸೆಲ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಮನವಿ..!

 

error: Content is protected !!
Scroll to Top