ಸರಕಾರದಿಂದ ಈದ್ ಮಿಲಾದ್ ಕುರಿತು ಮಾರ್ಗಸೂಚಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು . 19: ಕೋವಿಡ್ ಅಟ್ಟಹಾಸದ ಹಿನ್ನೆಲೆಯಲ್ಲಿ ಈದ್ ಮಿಲಾದ್ ಆಚರಣೆಗೆ ಸರಕಾರ ಮಾರ್ಗಸೂಚಿ ರಿಲೀಸ್ ಮಾಡಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಈದ್ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಬೇಕು ಎಂದು ತಿಳಿಸಿದ್ದಾರೆ.

 

ಈದ್ ಮಿಲಾದ್ ಸಾಮೂಹಿಕ ಮೆರವಣಿಗೆಗೆ ನಿಷೇಧ ಹೇರಲಾಗಿದೆ. ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ನಿಷೇಧ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ. ಮಸೀದಿಗಳಲ್ಲಿ ಕೋವಿಡ್ ನಿಯಮ ಪಾಲನೆ ಕಡ್ಡಾಯ ಎಂಬುದಾಗಿ ಮಾರ್ಗಸೂಚಿಯಲ್ಲಿ ತಿಳಿಸಿದೆ. ನಿಮಯಗಳನ್ನು ಉಲ್ಲಂಘಿಸಿದರೆ ಕಾನೂನು ಕ್ರಮವನ್ನು ಕೈಗೊಳ್ಳವ ಎಚ್ಚರಿಕೆಯನ್ನು ಸರಕಾರ ಕೊಟ್ಟಿದೆ.

Also Read  ಕೊಲೆ ಪ್ರಕರಣ: ನಕ್ಸಲ್ ಕನ್ಯಾಕುಮಾರಿ, ರಮೇಶ್‌ನನ್ನು ಕೋರ್ಟ್ ಗೆ ಹಾಜರುಪಡಿಸಿದ ಪೋಲಿಸರು

 

error: Content is protected !!
Scroll to Top