ಬೆಳ್ತಂಗಡಿ: ಎಂಟು ತಿಂಗಳ ಹೆಣ್ಣು ಮಗು ನೀರಿಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಅ.19: ಅರಸಿನಮಕ್ಕಿಯ ಕಲ್ಲಕೋಟೆ ಎಂಬಲ್ಲಿ ಎಂಟು ತಿಂಗಳ ಹೆಣ್ಣು ಮಗು ಬಕೆಟ್ ನಲ್ಲಿದ್ದ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.  ಮೃತಪಟ್ಟ ಮಗು ಅರಸಿನಮಕ್ಕಿಯ ಕಲ್ಲಕೋಟೆ ನಿವಾಸಿ ಜಗದೀಶ್ ಹಾಗೂ ವಿದ್ಯಾ ದಂಪತಿಯ ಪುತ್ರಿ.

 

 

ತಾಯಿ ಮನೆಯ ಸಮೀಪದಲ್ಲೇ ಬಟ್ಟೆ ಒಗೆಯುತ್ತಿದ್ದರು. ಈ ಸಂದರ್ಭದಲ್ಲಿ ಮಗು ಮನೆಯಿಂದ ಹೊರ ಬಂದಿದ್ದು, ಕೈಯಲ್ಲಿದ್ದ ಲೋಟ ಬಕೆಟ್ ಗೆ ಮುಳುಗಿಸಿದ್ದು, ಇದೇ ಸಂದರ್ಭದಲ್ಲಿ ಮಗು ಬಕೆಟ್ ನೊಳಗೆ ಬಿದ್ದಿದೆ ಎಂದು ತಿಳಿದುಬಂದಿದೆ. ಬಳಿಕ ಮಗು ಕಾಣದಿದ್ದಾಗ ತಾಯಿ ಮಗುವಿನ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಮಗು ಬಕೆಟ್ ನಲ್ಲಿ ಪತ್ತೆಯಾಗಿದೆ.

Also Read  ಮಾಸ್ಕೋದಿಂದ ಗೋವಾಕ್ಕೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ

 

error: Content is protected !!
Scroll to Top