ಸುಳ್ಯ: ರೆಸ್ಟೋರೆಂಟ್‌ ನಲ್ಲಿ ಕಳವು ➤ ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಸುಳ್ಯ , ಅ.19: ಇತ್ತೀಚಿನ ದಿನಗಳಲ್ಲಿ ಸುಳ್ಯ ಪರಿಸರದಲ್ಲಿ ಸರಣಿ ಕಳ್ಳತನ ಪ್ರಕರಣಗಳು  ಹೆಚ್ಚುತ್ತಿದ್ದು, ಕಳೆದ ವಾರ ಸುಳ್ಯ ಜೂನಿಯರ್‌ ಕಾಲೇಜು ರಸ್ತೆಯಲ್ಲಿರುವ ಅಂಗಡಿ ಹಾಗೂ ಚೆನ್ನಕೇಶವ ದೇವಾಲಯದ ಬಳಿ ಇರುವ ಅಂಗಡಿಯಿಂದ ಕಳ್ಳತನವಾಗಿದ್ದು, ಸುಳ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದೀಗ ಸುಳ್ಯ ಗಾಂಧಿನಗರ ಅಲ್‌ ಪಹಾಲ್‌ ಹಟ್‌ ರೆಸ್ಟೋರೆಂಟ್‌ ನಲ್ಲಿ ಅ.17 ರಂದು ಬೆಳಗಿನ ಜಾವ 3 ಗಂಟೆ ಸುಮಯದಲ್ಲಿ ಕಳ್ಳತನ ನಡೆದಿದ್ದು, ಕಳ್ಳತನ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Also Read  ಹತ್ರಾಸ್‍ನಲ್ಲಿ 4 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ..!!

 

 

ರೆಸ್ಟೋರೆಂಟ್‌ ಶಟರ್‌ ಮುರಿದು ಒಳನುಗ್ಗಿದ ಕಳ್ಳ 15,000/- ರೂ ನಗದು ಮತ್ತು ಕ್ಯಾಶ್‌ ಕೌಂಟರ್‌ ಮೇಲೆ ಇರಿಸಿದ್ದ ಹರಕೆ ಡಬ್ಬಿಯನ್ನು ಕದ್ದು ಪರಾರಿಯಾಗಿದ್ದಾನೆ.ರೆಸ್ಟೋರೆಂಟ್‌ ಮಾಲಕರು ಪೊಲೀಸರಿಗೆ ದೂರು ನೀಡಿದ್ದು, ಸಿಸಿ ಟಿವಿ ದೃಶ್ಯ ಆಧಾರಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

error: Content is protected !!
Scroll to Top