(ನ್ಯೂಸ್ ಕಡಬ) newskadaba.com ಉಡುಪಿ ಅ. 19: ಪರಿಸರ ಸ್ವಚ್ಛತೆ ಬಗ್ಗೆ ಸರ್ಕಾರ ಎಷ್ಟೇ ಮುಂಜಾಗ್ರತೆ ಕ್ರಮಗಳನ್ನು ಜಾರಿಗೆ ತಂದರೂ ಕೆಲವೊಂದು ಪ್ರದೇಶದ ಜನರು ಇದನ್ನ ಕ್ಯಾರೆ ಅನ್ನುತ್ತಿಲ್ಲ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಕೀಳಾಗಿ ವರ್ತಿಸುತ್ತಾರೆ.ಅದರಂತೆ ,ಉಡುಪಿಯ ಹಿರಿಯಡ್ಕದ ಪ್ರದೇಶವೊಂದರಲ್ಲಿ ಜನ ಸಿಕ್ಕಾಪಟ್ಟೆ ಕಸ ಎಸೆದು ಹೋಗುತ್ತಿದ್ದರು.
ಇದರಿಂದ ಇಡೀ ಪರಿಸರ ಗಬ್ಬು ನಾರುತ್ತಿತ್ತು, ಮಾತ್ರವಲ್ಲದೆ ಸಾಂಕ್ರಾಮಿಕ ರೋಗದ ಭೀತಿಯೂ ಶುರುವಾಗಿತ್ತು.ಹೀಗಾಗಿ ಆತ್ರಾಡಿ ಗ್ರಾಮಸ್ಥರೆಲ್ಲಾ ಸೇರಿ ‘ ಇಲ್ಲಿ ದಯವಿಟ್ಟು ಕಸ ಹಾಕಬೇಡಿ ‘ ಎಂದು ಕೋರಿಕೆಯ ಬ್ಯಾನರ್ ಅಳವಡಿಸಿದ್ದರು. ಆದರೆ ಕಸ ಎಸೆಯೋ ಶೂರರು ಕ್ಯಾರೇ ಅನ್ನಲಿಲ್ಲ.ಕೊನೆಗೆ ಇದೀಗ ಆಕ್ರೋಶಿತರಾದ ಗ್ರಾಮಸ್ಥರು ಸೂ….ಮಗನೇ ಇಲ್ಲಿ ಕಸ ಹಾಕಬೇಡಿ ಎಂದು ಬ್ಯಾನರ್ ಹಾಕಿದ್ದಾರೆ. ಹಾಗಂತ ಕಸ ಎಸೆತ ನಿಂತಿಲ್ಲ, ಆದರೆ ಕಸ ಎಸೆಯುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆಯಂತೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಹುಟ್ಟಿಸಿದೆ.