ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಯುವಕರು ನೀರುಪಾಲು

(ನ್ಯೂಸ್ ಕಡಬ) newskadaba.com ಕಾಪು . 19: ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಐವರು ಯುವಕರ ತಂಡದಲ್ಲಿ ಇಬ್ಬರು ಯುವಕರು ನಿರುಪಾಲಾದ ಘಟನೆ ರವಿವಾರ ಸಂಜೆ ನಡೆದಿದೆ. ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ.

ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ‌. ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಮೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ರೂಪೇಶ್ ಮೃತಪಟ್ಟಿದ್ದರು ಎನ್ನಲಾಗಿದೆ.

Also Read  ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ- ಆಗಸ್ಟ್ ತಿಂಗಳಲ್ಲಿ 14 ದಿನಗಳು ಬ್ಯಾಂಕ್ ಬಂದ್

 

error: Content is protected !!
Scroll to Top