ಶಾರ್ಟ್​ಸರ್ಕ್ಯೂಟ್​ ನಿಂದ ಕಾರು ಭಸ್ಮ ➤ ಅದೃಷ್ಟವಶಾತ್​ ಮೂವರು ಪಾರು

(ನ್ಯೂಸ್ ಕಡಬ) newskadaba.com ಬೆಂಗಳೂರು . 18: ಶರ್ಟ್​ಸರ್ಕ್ಯೂಟ್​ನಿಂದ ಕಾರು ಸಂಪೂರ್ಣ ಭಸ್ಮವಾಗಿದ್ದು, ಅದರಲ್ಲಿದ್ದ ಮೂವರು ಪಾರಾದ ಘಟನೆ ಬೆಂಗಳೂರಿನ ಮೈಸೂರು ರೋಡ್​ ಪಂಥರಪಾಳ್ಯದಲ್ಲಿ ನಡೆದಿದೆ.

 

ಚಾಲಕ, ಆತನ ಪತ್ನಿ ಮತ್ತು ತಾಯಿ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದರು, ಈ ವೇಳೆ ಅಕಸ್ಮಾತಾಗಿ ಶಾರ್ಟ್​ ಸರ್ಕ್ಯೂಟ್​ ಉಂಟಾಗಿದೆ. ಅದನ್ನು ಕಂಡ ಮೂವರು ತಕ್ಷಣ ಕಾರಿನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರಿನ ಬೆಂಕಿನಂದಿಸಿದ್ದಾರೆ, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಕುರಿತು ಬ್ಯಾಟರಾಯನಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಅಡಿಕೆ ಕದಿಯಲು ಮರಗಳನ್ನೇ ಕತ್ತರಿಸಿದ ಕಿಡಿಗೇಡಿಗಳು..!

 

error: Content is protected !!
Scroll to Top