(ನ್ಯೂಸ್ ಕಡಬ) newskadaba.com ನೋಯ್ಡಾ, ಅ. 18: ಗ್ಯಾಸ್ ತುಂಬಿದ ಈ ಐರನ್ ಮ್ಯಾನ್ ಆಕೃತಿಯ ಬಲೂನ್‌ವೊಂದು ಜನರಲ್ಲಿ ಆತಂಕ ಸೃಷ್ಟಿಸಿದ ಘಟನೆ ಉತ್ತರಪ್ರದೇಶದ ನೋಯ್ಡಾ ಬಳಿ ನಡೆದಿದೆ. ಈ ಬಲೂನ್‌ನನ್ನು ಏಲಿಯನ್ ಎಂದು ಭಾವಿಸಿ ಜನ ಆತಂಕಕ್ಕೀಡಾಗಿದ್ದರು.
ಆಗಸದಲ್ಲಿ ಹಾರಾಡುತ್ತಿದ್ದ ಮನುಷ್ಯನಾಕೃತಿಯ ಈ ವಸ್ತುವನ್ನು ನೋಡಿದ ನೋಯ್ಡಾದ ದನ್ಕೌರ್ ಟೌನ್ ಜನ, ಏಲಿಯನ್ ದಾಳಿ ನಡೆದಿದೆ ಎಂದೇ ಭಾವಿಸಿದ್ದರು. ಗ್ಯಾಸ್ ತುಂಬಿದ ಈ ಐರನ್ ಮ್ಯಾನ್ ಆಕೃತಿಯ ಬಲೂನ್ ಇಲ್ಲಿನ ಭಟ್ಟಾ ಪರ್ಸೌಲ್ ಬಳಿಯ ಕೆನಾಲ್ ಸಮೀಪ ಇಳಿದಾಗ, ಜನ ಏಲಿಯನ್ ನೋಡಲು ತಂಡೋಪತಂಡವಾಗಿ ಕೆನಾಲ್ ಬಳಿ ಜಮಾವಣೆಗೊಂಡಿದ್ದರು.ಈ ಮಧ್ಯ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ, ಅದು ಯಾವುದೇ ಪರಗ್ರಹ ಜೀವಿಯಾಗಿರದೇ ಗ್ಯಾಸ್ ತುಂಬಿದ ಐರನ್ ಮ್ಯಾನ್ ಆಕೃತಿಯ ಬಲೂನ್ ಎಂಬುದು ಸ್ಪಷ್ಟವಾಗಿದೆ.ಪೊಲೀಸರು ಬಂದು ಬಲೂನ್‌ನ್ನು ವಶಕ್ಕೆ ಪಡೆದಾಗಲೇ ಜನರ ಆತಂಕ ದೂರವಾಗಿದೆ.