ಬೆಂಗಳೂರು: ಸಿಕ್ಕಸಿಕ್ಕವರಿಗೆ ಚಾಕುವಿನಿಂದ ಇರಿತ ➤ ಅಮಾಯಾಕ ವ್ಯಕ್ತಿ ಬಲಿ.!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.18: ಕೂಲಿ ಕಾರ್ಮಿಕನೊಬ್ಬ ಮಟನ್ ಸ್ಟಾಲ್‍ನಿಂದ ಚಾಕುವನ್ನು ತೆಗೆದುಕೊಂಡು ದಾರಿಯಲ್ಲಿ ಸಿಕ್ಕಸಿಕ್ಕವರಿಗೆ ಇರಿದಿದ್ದರಿಂದ ಒಬ್ಬ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಎಂ.ಗಣೇಶ್(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

 

 

ಬಂಧಿತ ಆರೋಪಿ ಕಾಟನ್‍ಪೇಟೆ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಆಂಜನಪ್ಪಗಾರ್ಡ್‍ನ ನಿವಾಸಿ ಎಂ.ಗಣೇಶ್ ಬಾಳೆಕಾಯಿ ಮಂಡಿ ಹತ್ತಿರ ಮಟನ್ ತರಲು ಹೋಗಿದ್ದ. ಆ ಸಂದರ್ಭದಲ್ಲಿ ಮಟನ್ ಶಾಪ್‍ನಲ್ಲಿದ್ದ ಚಾಕುವನ್ನು ತೆಗೆದುಕೊಂಡು ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲಾ ಇರಿದಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಮಾರಿ (30) ಎಂದು ಗುರುತಿಸಲಾಗಿದೆ. ಇನ್ನು ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ ಎನ್ನಲಾಗಿದೆ.

Also Read  ವ್ಯಕ್ತಿಯ ಬ್ಯಾಗ್ ನಲ್ಲಿ ಗಾಂಜಾ ಇಟ್ಟು ಸುಲಿಗೆಗೆ ಯತ್ನ! ➤  ಇಬ್ಬರು ಪೊಲೀಸರ ಅಮಾನತು..!

 

 

error: Content is protected !!
Scroll to Top