ಭಟ್ಕಳ: ಗೂಡ್ಸ್ ರೈಲಿನಿಂದ ಕೆಳಕ್ಕೆ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಭಟ್ಕಳ . 18: ಚಲಿಸುತ್ತಿದ್ದ ಗೂಡ್ಸ್ ರೈಲಿನಿಂದ ಕೆಳಕ್ಕೆ ಬಿದ್ದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ಮುರುಡೇಶ್ವರ ಬೀನಾವೈದ್ಯ ಶಾಲೆಯ ಸಮೀಪ ಶನಿವಾರ ಸಂಜೆ  ನಡೆದಿದೆ.

ಗಾಯಗೊಂಡವರನ್ನು ಗುಜರಾತ್ ಪಡಲಿ ನಿವಾಸಿ ಕೃಪಾಲ್ ಸಿಂಗ್ ವಡಾರ್ (30) ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇವರು ಗೂಡ್ಸ್‍ರೈಲಿನಲ್ಲಿ ಮಂಗಳೂರು ಸುರತ್ಕಲ್‍ನಿಂದ ಗುಜರಾತ್ ಕೊಲಾಡ್‍ನತ್ತ ಪ್ರಯಾಣ ಬೆಳೆಸಿದ್ದು, ಪ್ಲೇಟಿನಲ್ಲಿದ್ದ ನೀರನ್ನು ರೈಲಿನಿಂದ ಹೊರಗೆ ಎಸೆಯುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಭರತ ನಾಟ್ಯ ಮನಸ್ವಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣ

error: Content is protected !!
Scroll to Top