ಕೋವಿಡ್ 19 ಹಿನ್ನಲೆ ➤ ಸುಳ್ಯದಲ್ಲಿ ಇಂದು ಜನಾಂದೋಲನ ಜಾಥಾ

(ನ್ಯೂಸ್ ಕಡಬ) newskadaba.com ಸುಳ್ಯ . 17: ಕೊವಿಡ್ 19 ಮುನ್ನೆಚ್ಚರಿಕಾ ಕ್ರಮವಾಗಿ ಸುಳ್ಯದಲ್ಲಿ ಇಂದು ಜನಾಂದೋಲನ ಜಾಥಾ ಅಯೋಜಿಸಲಾಯಿತು.  ಸುಳ್ಯ ನ್ಯಾಯಾಲಯದ ಮುಂಭಾಗದಿಂದ ಜಾಥಾ ಆರಂಭಿಸಲಾಯಿತು.

 

ಜನಾಂದೋಲನ ಜಾಥಾಕ್ಕೆ ಹಿರಿಯ ನ್ಯಾಯಾಧೀಶರಾದ ಪುರುಷೋತ್ತಮ್ ಚಾಲನೆ ನೀಡಿದರು . ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾಂಗ ಇಲಾಖೆ ವಕೀಲರ ಸಂಘ ಸುಳ್ಯ ನಗರ ಪಂಚಾಯತ್ ಆರೋಗ್ಯ ಇಲಖೆ ಸುಳ್ಯ, ಪೊಲೀಸ್ ಇಲಾಖೆ ಇದರ ಆಶ್ರಯದಲ್ಲಿ ಕೊರೋನಾ ಮುನ್ನೆಚ್ಚರಿಕೆಗಾಗಿ ಜಾಥಾ ನಡೆಸಲಾಯಿತು.

 

Also Read  ನವೆಂಬರ್ 17ರಿಂದ ಡಿಗ್ರಿ ಕಾಲೇಜ್ ಓಪನ್ ➤ ವಿದ್ಯಾರ್ಥಿಗಳಿಗೆ ಕೋವಿಡ್-19 ಟೆಸ್ಟ್ ಕಡ್ಡಾಯ

ಕಾರ್ಯಾಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ್ಯಾಯಾದೀಶರಾದ ಯಶ್ವಂತ್ ಕುಮಾರ್, ಸರಕಾರಿ ಅಭಿಯೋಜಕ ಜನಾರ್ದನ, ಸರ್ಕಲ್ ಇನ್ ಸ್ಪೆಕ್ಟರ್ ನವೀಚಂದ್ರ ಜೋಗಿ,ಎಸೈ ಹರೀಶ್, ನಗರ ಪಂ. ಮುಖ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ಎಂ ಆರ್, ವಕೀಲರ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

 

error: Content is protected !!
Scroll to Top