(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ.17: ಕ್ಯಾನ್ಸರ್ನಿಂದ ಮೃತಪಟ್ಟ ತಾಯಿಯ ಅಂತ್ಯಸಂಸ್ಕಾರಕ್ಕಾಗಿ ಜಾಗ ಕೊಡುವಂತೆ ತಂದೆ ಬಳಿ ಮಗ ಗೋಗರೆಯುತ್ತ ರಾತ್ರಿಯಿಡೀ ಮನೆ ಬಾಗಿಲಲ್ಲೇ ಅಮ್ಮನ ಶವ ಇಟ್ಟುಕೊಂಡು ಕಣ್ಣೀರಿಟ್ಟ ಹೃದಯವಿದ್ರಾವಕ ಅಮಾನವೀಯ ಘಟನೆಯೊಂದು ಹೊಸನಗರ ತಾಲೂಕಿನ ರಿಪ್ಪನ್ಪೇಟೆ ಸಮೀಪದ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಗ್ರಾಮದಲ್ಲಿ ಕಳೆದ ದಿನ ರಾತ್ರಿ ನಡೆದಿದೆ.
ಯಡಗುಡ್ಡೆ ಗ್ರಾಮದ ನಾಗರಾಜ್ ಎಂಬವರ ಮೊದಲ ಪತ್ನಿ ನಾಗರತ್ನ (50) ಕಳೆದ ದಿನ ಕ್ಯಾನ್ಸರ್ ನಿಂದಾಗಿ ಮೃತಪಟ್ಟಿದ್ದರು. ಆದರೆ ಪತ್ನಿಯ ಅಂತ್ಯಸಂಸ್ಕಾರಕ್ಕೆ ಜಾಗ ಕೊಡುವುದಿಲ್ಲ ಎಂದು ನಾಗರಾಜ್ ಮನೆಬಾಗಿಲು ಹಾಕಿಕೊಂಡು ರಾತ್ರಿಯಿಡಿ ಮನೆಯೊಳಗೆ ಕುಳಿತಿದ್ದರು. ತಾಯಿಯ ಅಂತ್ಯಸಂಸ್ಕಾರ ಮಾಡಲು ಜಾಗ ನೀಡಿ ಎಂದು ಮಗ ಗಣೇಶ್ ರಾತ್ರಿಯಿಂದಲೂ ಮನೆಯ ಮುಂದೆ ಶವವಿಟ್ಟು ಕಾಯುತ್ತಿದ್ದರು. ಘಟನಾ ಸ್ಥಳಕ್ಕೆ ರಿಪ್ಪನ್ ಪೇಟೆ ಠಾಣಾ ಪೊಲೀಸರು ಭೇಟಿ ನೀಡಿ, ಇದೀಗ ಅಂತ್ಯಸಂಸ್ಕಾರಕ್ಕೆ ಜಾಗ ನೀಡಿದ್ದಾರೆ.