ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದ ನಿರ್ವಾಹಕ ➤ ದಿಢೀರ್ ದಂಡ ವಿಧಿಸಿದ ಉಡುಪಿ ಡಿಸಿ ಜಗದೀಶ್

(ನ್ಯೂಸ್ ಕಡಬ) newskadaba.com ಉಡುಪಿ . 17: ಕೊವೀಡ್ 19 ವಿರುದ್ಧ ಹೋರಾಡುತ ಎಲ್ಲ ಸೇವೆಗಳು ಮತ್ತೆ ಆನ್ ಲಾಕ್ ಮೂಲಕ ಆರಂಭವಾಗಿದೆ. ಮಾಸ್ಕ್ ಧರಿಸಿ- ಸಾಮಾಜಿಕ ಅಂತರ ಕಾಯ್ದುಕೊಂಡು ಕರ್ತವ್ಯ ನಿರ್ವಹಿಸಲು ಸರ್ಕಾರವೇ ಆದೇಶ ಹೊರಡಿಸಿದೆ. ಈ ನಡುವೆ ಉಡುಪಿಯಲ್ಲಿ ಬಸ್ ನಿರ್ವಾಹರೋರ್ವರು ಮಾಸ್ಕ್ ಧರಿಸದೆ ಕಾರ್ಯನಿರ್ವಹಿಸುತ್ತಿರುವಾಗ ಸ್ವತಃ ಡಿಸಿ ಜಗದೀಶ್ ರವರ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ.

ಕೆ.ಎಸ್.ಆರ್.ಟಿ.ಸಿ ಬಸ್ಸಿನ ನಿರ್ವಾಹಕನೋರ್ವ ಮಾಸ್ಕ್ ಧರಿಸದೆ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಜಿಲ್ಲಾಧಿಕಾರಿಯಿಂದ ದಂಡ ಹಾಕಿಸಿಕೊಂಡ ಘಟನೆ ಶನಿವಾರ ಬೆಳಿಗ್ಗೆ ಉಡುಪಿ ಜಿಲ್ಲಾ ನ್ಯಾಯಾಲಯದ ಬಳಿ ನಡೆದಿದೆ.  ಮಾಸ್ಕ್ ಇಲ್ಲದೆ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಗಮನಿಸಿ ಬಸ್ಸನ್ನು ನಿಲ್ಲಿಸಲು ಸೂಚನೆ ನೀಡಿದರು.

Also Read  ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಜಿಲ್ಲಾಧಿಕಾರಿಯನ್ನು ಕಂಡು ಕೂಡಲೇ ಕಿಸೆಯಿಂದ ಮಾಸ್ಕ್ ತೆಗೆದು ಹಾಕಿಕೊಂಡಿದ್ದು ಈ ವೇಳೆ ಬಸ್ಸಿನಲ್ಲಿ ಕೆಲವೊಂದು ಪ್ರಯಾಣಿಕರೂ ಕೂಡ ಮಾಸ್ಕ್ ಹಾಕದೆ ಪ್ರಯಾಣಿಸುತ್ತಿರುವುದು ಕಂಡು ಬಂದಿದ್ದು ಸ್ಥಳೀಯ ನಗರ ಪೋಲಿಸರಿಗೆ ಕರೆಸಿ ನಿರ್ವಾಹಕ ಹಾಗೂ ಪ್ರಯಾಣಿಕರಿಗೆ ದಂಡ ಹಾಕುವಂತೆ ಸೂಚನೆ ನೀಡಿದರು. ನಿರ್ವಾಹಕರಾಗಿ ತಾವೇ ಮಾಸ್ಕ್ ಧರಿಸದಿದ್ದರೆ ಪ್ರಯಾಣಿಕರು ಕೂಡ ನಿಮ್ಮನ್ನೇ ಅನುಸರಿಸುತ್ತಾರೆ ಆದ್ದರಿಂದ ಮಾಸ್ಕ್ ಧರಿಸಿ ಇಲ್ಲವಾದರೆ ದಂಡ ತೆರಲು ತಯಾರಾಗಿ ಎಂದು ಎಚ್ಚರಿಕೆ ನೀಡಿದರು.

 

 

error: Content is protected !!
Scroll to Top