ಐತಿಹಾಸಿಕ ನಾಡಹಬ್ಬಕ್ಕೆ ಚಾಲನೆ ➤ ದಸರಾದಲ್ಲಿ ಆರು ಮಂದಿ ಕೊರೊನಾ ವಾರಿಯರ್ಸ್‌ಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಮೈಸೂರು . 17: ಇಡೀ ವಿಶ್ವವೇ ಬೆರಗಾಗಿ ನೋಡುವ ಐತಿಹಾಸಿಕ ಮೈಸೂರು ದಸರಾಗೆ ಇಂದು ಚಾಲನೆ ದೊರೆತಿದೆ. ಖ್ಯಾತ ಹೃದ್ರೋಗ ತಜ್ಞ ಡಾ.ಸಿಎನ್‌ ಮಂಜುನಾಥ್‌ರವರು ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೊಂಡ ಬೆನ್ನಲ್ಲೇ ಆರು ಮಂದಿ ಕೊರೊನಾ ವಾರಿಯರ್ಸ್‌ಗೆ  ಸನ್ಮಾನ ಮಾಡಲಾಗಿದೆ.

ಈ ಬಾರಿ ಇಡೀ ಜಗತ್ತು ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿರುವ ಈ ಸಮಯದಲ್ಲಿ ದಸರಾ ಕೂಡ ಸರಳವಾಗಿ ಆಚರಿಸಲ್ಪಡುತ್ತಿದ್ದು, ಕೊರೊನಾ ವಾರಿಯರ್ಸ್‌ ಅಸಂಖ್ಯಾತ ಜನರ ಪ್ರಾಣ ರಕ್ಷಣೆಗೆ ಹೋರಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿಯ ದಸರಾದಲ್ಲಿ ಕೊರೊನಾ ವಾರಿಯರ್ಸ್‌ಗಳನ್ನು ಸ್ಮರಿಸಲಾಗಿದೆ.ರಾಜ್ಯದ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ದಸರಾ ಉದ್ಘಾಟಕರಾದ ಖ್ಯಾತ ಹೃದ್ರೋಗ ತಜ್ಞ ಡಾ.ಸಿಎನ್‌ ಮಂಜುನಾಥ್‌ರವರ ಸಮ್ಮುಖದಲ್ಲಿ ಕೊರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸಲಾಗಿದೆ. ಇಂದಿನಿಂದ ಮೈಸೂರು ದಸರಾ ಆರಂಭಗೊಂಡಿದ್ದು, ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ.

Also Read  ​ಕೊಟ್ಟ ಮಾತು ಉಳಿಸಿಕೊಂಡ ಕೆಎಲ್ ರಾಹುಲ್

 

 

error: Content is protected !!
Scroll to Top