SSLC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ➤ ಆನ್ಲೈನ್ ಮೂಲಕ ಡೂಪ್ಲಿಕೇಟ್ ಅಂಕಪಟ್ಟಿಗೆ ಅರ್ಜಿ ಸಲ್ಲಿಕೆಗೆ ಅವಕಾಶ

(ನ್ಯೂಸ್ ಕಡಬ) newskadaba.com ಬೆಂಗಳೂರು . 17:  SSLC  ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ತಮ್ಮ ಮೂಲ ಅಂಕಪಟ್ಟಿಯನ್ನು ಕಳೆದುಕೊಂಡಲ್ಲಿ, ಅಂತಹ ವಿದ್ಯಾರ್ಥಿಗಳು ದ್ವಿತೀಯ, ತೃತೀಯ, ನಾಲ್ಕನೇ ಅಂಕಪಟ್ಟಿ ಮತ್ತು ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕಪಟ್ಟಿಯನ್ನು ಪಡೆಯಲು, ದಿನಾಂಕ 16-10-2020ರಿಂದ ಆನ್ ಲೈನ್ ಮೂಲಕವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಾದಂತ ವಿ.ಸುಮಂಗಲ ಸುತ್ತೋಲೆ ಹೊರಡಿಸಿದ್ದು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದ್ವಿತೀಯ, ತೃತೀಯ, ನಾಲ್ಕನೇ ಅಂಕಪಟ್ಟಿ ಮತ್ತು ಅನುತ್ತೀರ್ಣ ಅಂಕಪಟ್ಟಿಯನ್ನು ಪಡೆಯಲು ಬಯಸಿದಂತ ವಿದ್ಯಾರ್ಥಿಗಳು ದಿನಾಂಕ 16-10-2020ರಿಂದ ಜಾರಿಗೆ ಬರುವಂತೆ ಸದರಿ ಪ್ರಮಾಣ ಪತ್ರಕ್ಕಾಗಿ ವಿದ್ಯಾರ್ಥಿಗಳು ಇನ್ಮುಂದೆ ಆನ್ ಲೈನ್ ನಲ್ಲಿಯೇ ಅರ್ಜಿ ಸಲ್ಲಿಸಿ ಅಂಕ ಪಟ್ಟಿ ಪಡೆಯಬಹುದಾಗಿದೆ, ಎಂದು ಸುತ್ತೋಲೆ ಹೊರಡಿಸಿದ್ದಾರೆ.

Also Read  'ಮಳೆಗೆ ಅನಧಿಕೃತ ಮನೆಗಳಿಗೆ ಹಾನಿಯಾದರೂ ಪರಿಹಾರ ನೀಡುತ್ತೇವೆ' ಮಧು ಬಂಗಾರಪ್ಪ                 

error: Content is protected !!
Scroll to Top