SSLC ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು . 17: ಕೊರೊನಾ ಆತಂಕದ ನಡುವೆಯು ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 21ರಿಂದ 29 ರವರೆಗೆ 772 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಅದರಂತೆ ಇಂದು ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

 

ಪರೀಕ್ಷೆಗೆ 2,13,955 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಶಾಲಾ ಅಭ್ಯರ್ಥಿಗಳು 3354, ಪುನರಾವರ್ತಿತ 1,93,370, ಖಾಸಗಿ 1759, ಪುನರಾವರ್ತಿತ ಖಾಸಗಿ 15,472 ಜನ ಪರೀಕ್ಷೆ ಬರೆದಿದ್ದರು. ಇಂದು ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು kseeb.kar.nic.in ಅಥವಾ karresults.nic.in ನಲ್ಲಿ ಪರೀಕ್ಷಾ ಫಲಿತಾಂಶ ನೋಡಬಹುದು.

Also Read  ಮಂಗಳೂರು ಸ್ಫೋಟಕದ ಆರೋಪಿ ಆದಿತ್ಯ ರಾವ್ ಮಾನಸಿಕ ಅಸ್ವಸ್ಥ: ಬೊಮ್ಮಾಯಿ

 

 

 

error: Content is protected !!
Scroll to Top