ಬಿಳಿಯಾರಿನಲ್ಲಿ ಕಾಳಿಂಗ ಸರ್ಪ ಸೆರೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 16. ಅರಂತೋಡು ಸಮೀಪದ ಬಿಳಿಯಾರಿನ ವಿದ್ಯಾರ್ಥಿ ನಿಲಯದಲ್ಲಿ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಇದನ್ನು ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಉರಗ ತಜ್ಞ ಶಿವಾನಂದ ಕುಕ್ಕುಂಬಳರವರ ಸಹಕಾರದಿಂದ ಹಿಡಿದು ಸುಳ್ಯ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗಂಗಾಧರ ಬನ, ಶರಫು ಅರಂತೋಡು, ರಿಯಾಝ್ ಸಣ್ಣಮನೆ, ಸುಹೇಲ್ ಅರಂತೋಡು, ಅಸ್ಲಂ ಅರಂತೋಡು, ನಾಸಿರ್ ಪೆರಾಜೆ ಮೊದಲಾದವರು ಸಹಕರಿಸಿದರು.

Also Read  ಅನುಮಾನಾಸ್ಪದವಾಗಿ ವ್ಯಕ್ಕಿ ಸಾವು

error: Content is protected !!
Scroll to Top