(ನ್ಯೂಸ್ ಕಡಬ) newskadaba.com ಕಡಬ, ಅ. 16. ಹಾಯ್ಕು ಎಂದರೆ ಬಹುಜನರಿಗೆ ಅರಿವಿರಲಿಕ್ಕಿಲ್ಲ. ಏಕೆಂದರೆ ಇದೊಂದು ಜಪಾನಿನ ಕಾವ್ಯ ಪ್ರಕಾರ. ಹೌದು, ವಿದೇಶಿ ಸಾಹಿತ್ಯ ಪ್ರಕಾರವನ್ನು ರಚಿಸಿ, ಅಂತರ್ ರಾಜ್ಯ ಮಟ್ಟದಲ್ಲಿ ಸೈ ಎನಿಸಿಕೊಂಡ ಗ್ರಾಮೀಣ ಯುವ ಪ್ರತಿಭೆ ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಸಮ್ಯಕ್ತ್ .ಜೈನ್.
ಸಾಧನೆಗೆ ಅಡೆತಡೆಗಳಿರುವುದಿಲ್ಲ, ಅನಂತವಾದುದು. ಸಾಹಿತ್ಯ ಚಟುಕಟಿಗೆಯಲ್ಲಿ ನಿರಂತರವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಇವರು ದೇಶೀಯ ಸಾಹಿತ್ಯದೊಂದಿಗೆ ವಿದೇಶೀ ಸಾಹಿತ್ಯ ಪ್ರಕಾರವನ್ನೂ ರಚಿಸುತ್ತಿದ್ದು, ಇದೀಗ ಅಂತರರಾಜ್ಯ ಮಟ್ಟದಲ್ಲಿ ಮತ್ತೊಂದು ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ( ನೊಂ ) ಕೇಂದ್ರ ಸಮಿತಿ , ಬೆಂಗಳೂರು ವತಿಯಿಂದ , ತಾಲೂಕು ಘಟಕ, ಮಡಿಕೇರಿ – ಕೊಡಗು ಪ್ರಾಯೋಜಕತ್ವದಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ ಅಂತರ್ಜಾಲ ಆಧಾರಿತ ಹಾಯ್ಕುಗಳ ರಚನೆ ಸ್ಪರ್ಧೆಯಲ್ಲಿ ಕಡಬ ತಾಲೂಕಿನ ಸಮ್ಯಕ್ತ್ .ಜೈನ್ ರವರು ತೃತೀಯ ಸ್ಥಾನವನ್ನು ಪಡೆದು ಸಂಸ್ಥೆಯಿಂದ ಕೊಡಲ್ಪಡುವ ಪುರಸ್ಕಾರಕ್ಕೆ ಭಾಜನರಾಗಿರುತ್ತಾರೆ.
ಮೂರು ಕವನಸಂಕಲನಗಳ ಕರ್ತೃ ಆಗಿರುವ ಇವರು ಯುವ ಕವಿ, ಲೇಖಕ, ಚಿಂತಕ, ನಾಟಕ ರಚನೆಗಾರ,ನಿರೂಪಕ, ವಾಗ್ಮಿಯಾಗಿ ಚಿರಪರಿಚಿತಗೊಂಡಿದ್ದು, ಈ ಮೊದಲೇ ಹಲವಾರು ರಾಜ್ಯ ಹಾಗು ಅಂತರ್ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ – ಪುರಸ್ಕಾರ ಪಡೆದಿದ್ದು ಇವರು ನೂಜಿಬಾಳ್ತಿಲ, ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರ.