ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ► ಇಮಾನ್ ಅಹ್ಮದ್ ನಿಧನ

(ನ್ಯೂಸ್ ಕಡಬ) newskadaba.com ಅಬುಧಾಬಿ,ಸೆ.25, ಜಗತ್ತಿನ ಅತೀ ಹೆಚ್ಚು ತೂಕದ ಮಹಿಳೆ ಎಂದೇ ಹೆಸರಾಗಿದ್ದ ಈಜಿಪ್ಟ್​ನ ಇಮಾನ್ ಅಹ್ಮದ್ ಸೋಮವಾರ ನಿಧನರಾಗಿದ್ದಾರೆ.

 

ಇಮಾನ್ ಅಹ್ಮದ್( 37) ನಿಧನ ಕುರಿತಂತೆ ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದು, ಹೃದ್ರೋಗ ಹಾಗೂ ಕಿಡ್ನಿಗಳ ವೈಫಲ್ಯವೇ ಸಾವಿಗೆ ಕಾರಣ ಎಂದು ಮಾಹಿತಿ ನೀಡಿದ್ದಾರೆ.

ಈಜಿಪ್ಟ್ ನ ಅಲೆಕ್ಸಾಂಡ್ರಿಯಾದ ನಿವಾಸಿಯಾಗಿರುವ ಇಮಾನ್ ಬರೋಬ್ಬರಿ 500 ಕೆಜಿ ತೂಗುತ್ತಿದ್ದ ದೇಹದ ತೂಕ ಕಡಿಮೆ ಮಾಡಲು ಕಳೆದ ಫೆಬ್ರವರಿ ತಿಂಗಳಿನಲ್ಲಿ ಮುಂಬೈಗೆ ಕರೆತರಲಾಗಿತ್ತು.

ಮುಂಬೈ ವೈದ್ಯರು ಆಕೆಯ ದೇಹದ ತೂಕವನ್ನು 330 ಕೆಜಿಯಷ್ಟು ಕಡಿಮೆ ಮಾಡಿದ್ದರು. ಆದರೆ, ಆ ವೇಳೆ ವೈದ್ಯರ ಚಿಕಿತ್ಸೆಗೆ ಆಕೆಯ ಕುಟುಂಬ ಸದಸ್ಯರು ಸ್ಪಂದಿಸಲಿಲ್ಲ. ಕೊನೆಗೆ ವಿಶೇಷ ಚಿಕಿತ್ಸೆಗಾಗಿ ಇಮಾನ್, ಅಬುದಾಬಿಯ ಆಸ್ಪತ್ರೆಗೆ ದಾಖಲಾಗಿದ್ದರು. ಅತಿಯಾದ ದೇಹತೂಕದಿಂದಾಗಿ, ಹೃದಯದ ತೊಂದರೆ ಮತ್ತು ಕಿಡ್ನಿ ವೈಫಲ್ಯಗಳಿಂದ ಬಳಲುತ್ತಿದ್ದ ಇಮಾನ್, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Also Read  ಸಾಕು ನಾಯಿಗಳು ಕಚ್ಚಾಡಿತೆಂದು ಮಾಲೀಕರ ನಡುವೆ ಜಗಳ - ಇಬ್ಬರ ಹತ್ಯೆ

 ಕೆಲ ದಿನಗಳ ಹಿಂದಷ್ಟೇ ಇಮಾನ್ ತನ್ನ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

error: Content is protected !!
Scroll to Top