ದಿನೇಶ್ ಕಾರ್ತಿಕ್ ಕೆಕೆಆರ್ ನಾಯಕತ್ವಕ್ಕೆ ಗುಡ್ ಬೈ..‼️ ➤ ಕಾರಣವೇನೆಂದು ತಿಳುಯಬೇಕೇ…❓

(ನ್ಯೂಸ್ ಕಡಬ) newskadaba.com ದುಬೈ, ಅ. 16. ಕೋಲ್ಕತ್ತಾ ನೈಟ್ ರೈಡರ್ಸ್​ ತಂಡವು ಈ ಬಾರಿಯ ಐಪಿಎಲ್​ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ದಿನೇಶ್ ಕಾರ್ತಿಕ್ ನಾಯಕತ್ವದ ಈ ತಂಡವು ಸದ್ಯ ಪಾಯಿಂಟ್ಸ್ ಪಟ್ಟಿಯಲ್ಲಿ ಆರ್​.ಸಿ.ಬಿ ನಂತರ ಅಂದರೆ ನಾಲ್ಕನೇ ಸ್ಥಾನದಲ್ಲಿದೆ.

ಆದರೆ ಇದೀಗ ಕೆಕೆಆರ್ ತಂಡದ ನಾಯಕತ್ವ ವಹಿಸಿಕೊಂಡಿರುವ ದಿನೇಶ್ ಕಾರ್ತಿಕ್ ಅವರು ಗುಡ್ ಬೈ ಹೇಳಲು ಮುಂದಾಗಿದ್ದಾರೆ. ತಂಡವು ಉತ್ತಮ ಪ್ರದರ್ಶನ ತೋರುತ್ತಿದ್ದರೂ ಕೂಡಾ ಈ ಸಮಯದಲ್ಲಿ ನಾಯಕ ಯಾಕೆ ಬಿಟ್ಟು ಹೋಗ್ತಿದ್ದಾರೆ ಅನ್ನೋದಕ್ಕೆ ಉತ್ತರ ಸಿಕ್ಕಿದೆ. ದಿನೇಶ್ ಕಾರ್ತಿಕ್ ತಂಡದ ನಾಯಕತ್ವ ಜವಾಬ್ದಾರಿ ವಹಿಸಿರುವುದರಿಂದ ಅವರಿಗೆ ತಮ್ಮ ಬ್ಯಾಟಿಂಗ್ ಮೇಲೆ ಹೆಚ್ಚು ಕೇಂದ್ರೀಕರಿಸಲು ಆಗುತ್ತಿಲ್ಲ. ತನ್ನ ಬ್ಯಾಟಿಂಗ್ ನಿಂದ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಉದ್ದೇಶವುರುವುದರಿಂದ ನಾಯಕತ್ವವನ್ನು ಇಂಗ್ಲೆಂಡ್​ನ ಇಯಾನ್ ಮಾರ್ಗನ್​ಗೆ ಬಿಟ್ಟುಕೊಡಲು ಮುಂದಾಗಿದ್ದಾರೆ ಅಂತ ಕೆಕೆಆರ್ ತಿಳಿಸಿದೆ.

Also Read  ವಿಶ್ವಕಪ್ ಗೆ ಅಧಿಕೃತ ಪಾಲುದಾರರಾಗಿ ಕೋಕಾ-ಕೋಲಾ

error: Content is protected !!
Scroll to Top