ಮಕ್ಕಳ ಮೇಲೆ ದೌರ್ಜನ್ಯ ➤ 3ನೇ ಸ್ಥಾನದಲ್ಲಿ ಬೆಂಗಳೂರು.!!

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 16:  ಮಕ್ಕಳ‌ ಮೇಲಿನ ದೌರ್ಜನ್ಯ ನಡೆಯುವುದರಲ್ಲಿ ದೇಶದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಹೀಗೊಂದು ಆತಂಕಕಾರಿ ವರದಿ ಹೊರಬಿದ್ದಿದ್ದು ಸಿಲಿಕಾನ್ ಸಿಟಿಯ ಜನರಲ್ಲಿ ತಲ್ಲಣ ಹೆಚ್ಚಿಸಿದೆ.

 

ದೇಶದ 19 ಮಹಾನಗರಗಳಲ್ಲಿ ನಡೆಯುವ ಅಪರಾಧಗಳ ಕ್ರೋಢೀಕೃತ ವರದಿ ನೀಡಿದೆ ಎನ್‌ ಸಿ ಆರ್ ಬಿ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಸಂಸ್ಥೆ 2019ರ ವರ್ಷದಲ್ಲಿ ಸಂಭವಿಸಿದ ಅಪರಾಧ ಪ್ರಕರಣಗಳ ವರದಿ ನೀಡಿದೆ. ಈ ಪಟ್ಟಿಯಲ್ಲಿ ದೆಹಲಿ ಮೊದಲನೇ ಸ್ಥಾನ, ಮುಂಬೈ ಎರಡನೇ ಸ್ಥಾನ, ಬೆಂಗಳೂರಿಗೆ ಮೂರನೇ ಸ್ಥಾನ ಇದೆ.2017 ರಲ್ಲಿ ಬೆಂಗಳೂರಿನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ 1582 ರಷ್ಟಿತ್ತು. 2018ರಲ್ಲಿ ಈ ಸಂಖ್ಯೆ 1815 ಗೆ ಏರಿಕೆಯಾಗಿತ್ತು. 2019 ರಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಕ್ಕಳ ವಿರುದ್ಧ ನಡೆದ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ 1488 ಪ್ರಕರಣಗಳು ದಾಖಲಾಗಿವೆ.

Also Read  ವರಮಹಾಲಕ್ಷ್ಮಿ ವ್ರತ ಹೀಗೆ ಆಚರಿಸುವುದು ಲಾಭ ಮತ್ತು ದಿನ ಭವಿಷ್ಯ

 

error: Content is protected !!
Scroll to Top