ಕಾಡಾನೆ ದಾಳಿಗೆ ಸಾಕಾನೆ “ರಾಜೇಂದ್ರ” ಸಾವು.!

(ನ್ಯೂಸ್ ಕಡಬ) newskadaba.com ಮಡಿಕೇರಿ . 16: ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕಾಡಾನೆ ದಾಳಿಯಿಂದ ಸಾಕಾನೆಯೊಂದು ಮೃತಪಟ್ಟಿದೆ. ರಾಜೇಂದ್ರ (56) ಹೆಸರಿನ ಗಂಡಾನೆ ಮೃತಪಟ್ಟಿದೆ.

 

ಮಂಗಳವಾರ ರಾತ್ರಿ ಈ ಆನೆಯನ್ನು ಮೇವಿಗಾಗಿ ಕಾಡಿಗೆ ಬಿಡಲಾಗಿತ್ತು. ಮರು ದಿನ ಬೆಳಿಗ್ಗೆ ಆನೆಯನ್ನು ಶಿಬಿರಕ್ಕೆ ಕರೆತರಲು ಮಾವುತ ಮತ್ತು ಕಾವಾಡಿಗರು ತೆರಳಿದಾಗ ಕಾಡಾನೆಯೊಂದಿಗೆ ಕಾದಾಟ ನಡೆಸಿದ ಆನೆಯ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು. ಶಿಬಿರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದೆ ತೀವ್ರ ಅಸ್ವಸ್ಥಗೊಂಡ ಆನೆಯು ಗುರುವಾರ ಮೃತಪಟ್ಟಿದೆ ಎಂದು ಶಿಬಿರದ ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್ ತಿಳಿಸಿದರು. 30 ವರ್ಷಗಳ ಕಾಲ ಶಿಬಿರದಲ್ಲಿದ್ದ ಆನೆ ಅಭಿಮನ್ಯುವನ್ನು ಬಿಟ್ಟರೆ, ಇತರೆ ಆನೆಗಳಿಗೆ ನಾಯಕನಂತಿತ್ತು ಎಂದು ಶಿಬಿರದ ಮಾವುತರು ಹೇಳಿದರು.

Also Read  ತೆರಿಗೆ ಅನ್ಯಾಯ:ಕನ್ನಡಿಗರನ್ನು ಕೆಣಕುತ್ತಿರುವ ಕೇಂದ್ರ ಸರಕಾರ-ಡಿ.ಕೆ ಸುರೇಶ್ ಆಕ್ರೋಶ

 

 

error: Content is protected !!
Scroll to Top