ಜೈಲಿನ ಪಂಜರದಲ್ಲಿ ರಾ’ಗಿಣಿ’ ಯ ಗೋಳಾಟ ➤ ಆಗುತ್ತಿಲ್ಲ ಆಸ್ಪತ್ರೆಗೆ ಸೇರಿಸಿ ಎಂದ ರಾ’ಗಿಣಿ’

(ನ್ಯೂಸ್ ಕಡಬ) newskadaba.com ಬೆಂಗಳೂರು . 15: ಡ್ರಗ್ಸ್ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟಿ ರಾಗಿಣಿಗೆ ತೀವ್ರ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ. ಹೀಗಾಗಿ ರಾತ್ರಿ ಪೂರ್ತಿ ಗೋಳಾಡಿದ್ದು, ಜೈಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆಪರಪ್ಪನ ಅಗ್ರಹಾರದಲ್ಲಿರುವ ರಾಗಿಣಿ, ರಾತ್ರಿಯಿಂದ ಹೆಚ್ಚು ಬೆನ್ನು ನೋವು ಎಂದು ಜೈಲಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಅಲ್ಲದೆ ತುರ್ತಾಗಿ ನನ್ನನ್ನು ಆಸ್ಪತ್ರೆಗೆ ಸೇರಿಸಿ, ಆಗುತ್ತಿಲ್ಲ ಎಂದು ಗೋಳಾಡಿದ್ದಾರೆ. ನಂತರ ಜೈಲಿನ ಆಸ್ಪತ್ರೆಗೆ ಸೇರಿಸಲಾಗಿದ್ದು, ರಾತ್ರಿ ಪೂರ್ತಿ ಚಿಕಿತ್ಸೆ ಪಡೆದಿದ್ದಾರೆ. ಈ ಮೂಲಕ ಅಧಿಕಾರಿಗಳ ನಿದ್ದೆಗೆಡಿಸಿದ್ದಾರೆ. ರಾಗಿಣಿ ಗೋಳಾಟ ತಾಳಲಾರದೆ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.ಕಳೆದ ಮೂರು ದಿನಗಳ ಹಿಂದೆಯಷ್ಟೇ ಆರೋಗ್ಯದ ಸಮಸ್ಯೆ ಎಂದು ರಾಗಿಣಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಹೆಚ್ಚು ಬೆನ್ನು ನೋವು ಎಂದು ಜೈಲು ಆಸ್ಪತ್ರೆಯಲ್ಲಿ ರಾತ್ರಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

Also Read  ಜೈಲಿನಿಂದ ತಪ್ಪಿಸಲೆತ್ನಿಸಿದ 129 ಕೈದಿಗಳು ಮೃತ್ಯು..!

error: Content is protected !!
Scroll to Top