ಪಟಾಕಿ ಅಂಗಡಿಗಳಿಗೆ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ ➤ ಮಾರ್ಗಸೂಚಿಯಲ್ಲಿ ಏನಿದೆ ಗೊತ್ತೇ.!

(ನ್ಯೂಸ್ ಕಡಬ) newskadaba.com ಬೆಂಗಳೂರು . 15: ಕೊರೊನಾ ವೈರಸ್‌ ನಡುವೆಯೇ ದೀಪಾವಳಿ ಹಬ್ಬದ ಆಚರಣೆಗೆ ರಾಜ್ಯ ಸರಕಾರ ಮಾರ್ಗಸೂಚಿ ಪ್ರಕಟ ಮಾಡಿದೆ. ಈ ಬಾರಿ ಸರಳ ಹಾಗೂ ಮಾಲಿನ್ಯ ರಹಿತ ದೀಪಾವಳಿ ಆಚರಣೆಗೆ ಸರಕಾರ ಕರೆ ನೀಡಿದೆ. ನವೆಂಬರ್‌ 14 ರಿಂದ 17ರವರೆಗೆ ದೀಪಾವಳಿ ಹಬ್ಬದ ಆಚರಣೆ ಇರಲಿದ್ದು, ಈ ಸಂದರ್ಭದಲ್ಲಿ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಸರಕಾರ ಜನರಿಗೆ ಸೂಚಿಸಿದೆ.

 

ಇನ್ನು, ದೀಪಾವಳಿ ಸಂದರ್ಭದಲ್ಲಿ ಪ್ರಾಧಿಕಾರಗಳಿಂದ ಅಧಿಕೃತ ಪರವಾನಿಗೆಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿಯನ್ನು ಮಾರಾಟ ಮಾಡಬೇಕೆಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್ ಆದೇಶಿದ್ದಾರೆ. ಈ ಕುರಿತು ರಾಜ್ಯದ ಜನತೆಗೆ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಅವರು, ಪಟಾಕಿ ಮಾರಾಟದ ಮಳಿಗೆಗಳನ್ನು ನ.1ರಿಂದ 17ರವರೆಗೆ ಮಾತ್ರ ತೆರೆದಿರಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Also Read  ಸರ್ಕಾರಿ ಕೆಲಸ ನೀಡುವುದಾಗಿ ಆಮಿಷ- ದೂರು

 

error: Content is protected !!
Scroll to Top