ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಮ್ಮ.!!

(ನ್ಯೂಸ್ ಕಡಬ) newskadaba.com ಹಾವೇರಿ . 14: ತಮ್ಮನೇ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

 

ನಾಗರಾಜ ಗೊರವರ(22) ಹತ್ಯೆಯಾದ ಅಣ್ಣ. ಈತನನ್ನು ತಮ್ಮ ದಿಳ್ಳೆಪ್ಪ ಗೊರವರ (20) ಕೊಲೆ ಮಾಡಿದ್ದಾನೆ. ನಾಗರಾಜ ದಿನನಿತ್ಯ ಕುಡಿದು ಬಂದು ತಂದೆ-ತಾಯಿ ಜೊತೆ ಜಗಳವಾಡ್ತಿದ್ದ. ಹೆತ್ತವರಿಗೆ ನೀಡ್ತಿದ್ದ ಅಣ್ಣನ ಕಿರಿಕಿರಿಯಿಂದ ಬೇಸತ್ತು ಕೊಡಲಿಯಿಂದ ಕೊಚ್ಚಿ ತಮ್ಮ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಣ್ಣನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ದಿಳ್ಳೆಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Also Read  ಸರ್ವಜ್ಞ ವಚನಗಳಿಂದ ಸಮಾಜದಲ್ಲಿ ನೈತಿಕತೆ ನಿರ್ಮಾಣ

 

error: Content is protected !!
Scroll to Top