ಯೋಗ ಮಾಡ್ತಿದ್ದಾಗ ಆನೆ ಮೇಲಿಂದ ಬಿದ್ದ ಬಾಬಾ ರಾಮ್‍ದೇವ್ ➤ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಮಥುರಾ . 14: ಬಾಬಾ ರಾಮ್‍ದೇವ್ ಅವರು ಯೋಗಾಸನ ಹಾಗೂ ಯೋಗದ ವಿವಿಧ ಭಂಗಿಗಳ ಮೂಲಕವೇ ಪ್ರಸಿದ್ಧಿ ಪಡೆದಿದ್ದಾರೆ. ಆದರೆ ಇದೀಗಾ, ಯೋಗ ಮಾಡುತ್ತಿರುವಾಗ ಯೋಗ ಗುರು ಬಾಬಾ ರಾಮ್‍ದೇವ್ ಆನೆಯ ಮೇಲಿಂದ ಬಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ಮಥುರಾದ ರಾಮನಾರತಿಯ ಗುರು ಶರಣನ್ ಆಶ್ರಮದಲ್ಲಿ ಸಂತರಿಗೆ ಯೋಗ ಕಲಿಸುವಾಗ ಈ ಘಟನೆ ಸಂಭವಿಸಿದೆ. 22 ಸೆಕೆಂಡ್‍ಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆನೆಯ ಮೇಲೆ ಬಾಬಾ ರಾಮ್‍ದೇವ್ ಯೋಗಾಸನ ಮಾಡುತ್ತಿದ್ದು, ಕೆಲವೇ ಸೆಕೆಂಡ್‍ಗಳ ಬಳಿಕ ಆನೆ ಅತ್ತಿತ್ತ ವಾಲುತ್ತದೆ. ಈ ವೇಳೆ ರಾಮ್‍ದೇವ್ ಅವರ ಬ್ಯಾಲೆನ್ಸ್ ತಪ್ಪಿದ್ದು, ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಮೇಲಕ್ಕೆದ್ದು ಮುಂದೆ ಹೋಗಿದ್ದಾರೆ.ಈ ಹಿಂದೆ ಬಾಬಾ ರಾಮ್‍ದೇವ್, ಸೈಕಲ್ ಮೇಲಿಂದ ಬಿದ್ದಿದ್ದ ವಿಡಿಯೋ ಸಹ ವೈರಲ್ ಆಗಿತ್ತು.

Also Read  ಮದುವೆಗೆ ಪರಿಸರ ಸ್ನೇಹಿ ಪತ್ರಿಕೆ ಮಾಡಿಸಿದ ತರುಣ್, ಸೋನಾಲ್

 

 

error: Content is protected !!
Scroll to Top