ಎ.ಸಿ ಆನ್​ ಮಾಡಿ ಕಾರಿನಲ್ಲೇ ನಿದ್ದೆಗೆ ಜಾರಿದ ➤ ಮರುದಿನ ಶವವಾಗಿ ಪತ್ತೆಯಾದ .?!

(ನ್ಯೂಸ್ ಕಡಬ) newskadaba.com ವಿಟ್ಲ . 13:  ಉತ್ತರ ಪ್ರದೇಶದ ನೊಯ್ಡಾದಲ್ಲಿ. ಮದ್ಯಪಾನ ಮಾಡಿ, ಕಾರಿನಲ್ಲಿ ಎ.ಸಿ ಹಾಕಿ ಮಲಗಿದ್ದ ವ್ಯಕ್ತಿ ಮರುದಿನ ಶವವಾಗಿ ಪತ್ತೆಯಾಗಿದ್ದಾರೆ. ಸುಂದರ್ ಪಂಡಿತ್ ಎನ್ನುವವರು ಮೃತ ದುರ್ದೈವಿ. ಇವರು ಮೊನ್ನೆ ರಾತ್ರಿ ಮದ್ಯಪಾನ ಮಾಡಿ ಕಾರಿನಲ್ಲಿ ಮಲಗಿದ್ದು, ಕಾರಿ ಕಿಟಕಿಯೆಲ್ಲವೂ ಮುಚ್ಚಿತ್ತು. ಮಾರನೆಯ ದಿನ ನೋಡಿದಾಗ ಅಲ್ಲಿಯೇ ಹೆಣವಾಗಿದ್ದರು.ಸದಾ ಮದ್ಯಪಾನ ಮಾಡುತ್ತಿದ್ದ ಅವರು, ಅಂದು ಕೂಡ ಕುಡಿದುಕೊಂಡೇ ಮನೆಗೆ ಹೋಗಿದ್ದಾರೆ.

 

ಬೇಸ್‌ಮೆಂಟ್‌ ಅಲ್ಲಿ ಕಾರು ಪಾರ್ಕ್​ ಮಾಡುವಷ್ಟರಲ್ಲಿ ನಿದ್ದೆ ಬಂದಿದೆ. ಎ.ಸಿ. ಆನ್​ ಇತ್ತು. ಹಾಗೆಯಾ ನಿದ್ದೆಗೆ ಜಾರಿಬಿಟ್ಟಿದ್ದಾರೆ. ಮರುದಿನ ಬೆಳಗ್ಗೆ ಬೇಸ್‌ಮೆಂಟ್‌ಲ್ಲಿ ಕಾರು ಇದ್ದಿದ್ದನ್ನು ಗಮನಿಸಿದ ಅವರ ಸಹೋದರ ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಲ್ಲಿಯವರೆಗೆ ಅವರು ಮೃತಪಟ್ಟಿದ್ದರು.

Also Read  ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ➤ ಇಬ್ಬರು ಉಗ್ರರ ಅರೆಸ್ಟ್

 

ಎಲ್ಲ ಕಿಟಿಕಿಗಳು ಬಂದ್​ ಇದ್ದು, ಎ.ಸಿ ಆನ್​ ಇದ್ದ ಕಾರಣ, ಕಾರ್ಬನ್ ಮೊನಾಕ್ಸೈಡ್ ಹೆಚ್ಚಾಗಿ ಪಸರಿಸಿದೆ. ಈ ವಿಷ ಅನಿಲವನ್ನು ಸೇವಿಸಿರುವ ಕಾರಣ ಸಾವಿಗೀಡಾಗಿರುವುದಾಗಿ ವೈದ್ಯರು ಹೇಳಿದ್ದಾರೆ.ಕಾರಿನಲ್ಲಿ ಎ.ಸಿ ಆನ್​ ಮಾಡಿಕೊಂಡು, ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಮಲಗುವ ಮುನ್ನ ಎಚ್ಚರ ವಹಿಸುವುದು ಅಗತ್ಯವಾಗಿದೆ.

 

error: Content is protected !!
Scroll to Top