ದೇವ ಶಿಕ್ಷೆಯಿಂದ ಪಾರಾಗಲು ಜನಸೇವೆ ವ್ಯಾಪಕಗೊಳಿಸುವಂತೆ ಜಿಲ್ಲಾ ಎಸ್.ವೈ.ಎಸ್ ಕರೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 13.  ಜಿಲ್ಲಾ ಎಸ್ ವೈ ಎಸ್ (ಸುನ್ನಿ ಯುವ ಜನ ಸಂಘ) ಕಾರ್ಯಕರ್ತರ ಸಮಾವೇಶವು ಸುಳ್ಯ ಗಾಂಧಿನಗರ ಸುನ್ನೀ ಮಹಲ್ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ವಿದ್ವಾಂಸರಾದ ಎಸ್.ಬಿ ಮುಹಮ್ಮದ್ ದಾರಿಮಿಯವರು, ಇಂದು ನಾವು ಬಲಿಷ್ಠ ಸಂಘ ಶಕ್ತಿ ಯಾಗುವುದರ ಅನಿವಾರ್ಯತೆಯನ್ನು ವಿವರಿಸಿ ಸಮಸ್ಯೆ, ಸವಾಲುಗಳನ್ನು ಎದುರಿಸಲು ಒಗ್ಗಟ್ಟು ಪ್ರಮುಖ ಅಂಶವೆಂದು ಅಭಿಪ್ರಾಯ ಪಟ್ಟರು.
ಇಡೀ ಮುಸ್ಲಿಂ ಸಮಾಜಕ್ಕೆ ಅನ್ವಯಿಸುವ ಸಮಸ್ತದ ಕಾರ್ಯಚಟುವಟಿಕೆಗಳು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದ್ದು, ಸಮಾಜವನ್ನು ಎಲ್ಲಾ ಕ್ಷೇತ್ರದಲ್ಲೂ ಬಲಿಷ್ಠಗೊಳಿಸುವುದೇ ಅದರ ಗುರಿ ಎನ್ನುತ್ತಾ ಸಮಸ್ತದೊಂದಿಗೆ ಎಲ್ಲರೂ ಕೈ ಜೋಡಿಸಲು ಮನವಿ ಮಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೌಲಾನ ಯು.ಕೆ ದಾರಿಮಿ ಮಾತನಾಡಿ, ಜನರ ಅಕ್ರಮ ಅನ್ಯಾಯದ ಫಲವಾಗಿ ದೇವಶಿಕ್ಷೆಯು ಜಗತ್ತಿನಾದ್ಯಂತ ಪ್ರಸರಿಸುತ್ತಿದೆ. ವಿವಿಧ ರೀತಿಯ ರೋಗ ರುಜಿನಗಳು ಮತ್ತು ದುರಂತಗಳ ಸರಮಾಲೆಗಳೇ ಸಂಭವಿಸುತ್ತಿದ್ದು, ಇದನ್ನು ಅತಿಜಯಿಸಲು ಜನಸೇವೆಯ ಮೂಲಕ ದೇವ ಸಾಮೀಪ್ಯ ಗಳಿಸುವುದೊಂದೇ ದಾರಿ ಎಂದರು.
ಜಿಲ್ಲಾ ನಾಯಕರಾದ ತಬೂಕು ದಾರಿಮಿ, ರಫೀಖ್ ಹಾಜಿ ಕೊಡಾಜೆ, ತಾಜ್ ಮುಹಮ್ಮದ್ ಸಂಪಾಜೆ, ಕರಾವಳಿ ಹಮೀದ್ ಉಪ್ಪಿನಂಗಡಿ ಮೊದಲಾದವರು ಮಾತನಾಡಿದರು.

Also Read  ನೆಲ್ಯಾಡಿ: ಬೈಕ್- ಓಮ್ನಿ ಕಾರು ನಡುವೆ ಢಿಕ್ಕಿ ➤ ಸವಾರ ಗಂಭೀರ


ಹಕೀಮ್ ಪರ್ತಿಪ್ಪಾಡಿ, ಎಸ್.ಕೆ ಹಮೀದ್ ಹಾಜಿ, ಅಕ್ಬರ್ ಮುಸ್ಲಿಯಾರ್ ಅರಂಬೂರು, ರಫೀಕ್ ಮುಸ್ಲಿಯಾರ್ ಅಜ್ಜಾವರ, ಅಹ್ಮದ್ ಮದನಿ, ಹಸೈನಾರ್ ಧರ್ಮತನ್ನಿ, ಝೈನುದ್ದೀನ್ ಮುಸ್ಲಿಯಾರ್ ಅಜ್ಜಾವರ, ಅಹ್ಮದ್ ಹಾಜಿ ಪಾರ, ಟಿ.ಎಚ್ ಮುಹಮ್ಮದ್ ಕುಂಞಿ, ಸುಪ್ರೀಂ ಅಹ್ಮದ್ ಹಾಜಿ, ಅಶ್ರಪ್ ಅರಂತೋಡು, ಕೆ.ಎಚ್ ಅಬ್ದುಲ್ ರಝಾಕ್, ಮೂಸಾನ್ ಕೆ.ಎಮ್ ಅರಂತೋಡು, ಅಬ್ದುಲ್ಲ ಕನಕಮಜಲು, ಕೆ.ಸಿ ಹಸೈನಾರ್ ಕನಕಮಜಲು, ಎ.ಎಂ ಅಬೂಬಕರ್ ಹಾಜಿ ಅಜ್ಜಾವರ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಇದೇ ಸಂಧರ್ಭದಲ್ಲಿ ಎಸ್.ವೈ.ಎಸ್ ಜಿಲ್ಲಾ ಸಮಿತಿ ವತಿಯಿಂದ ಸಂಗ್ರಹಿಸಿದ್ದ ಯತೀಂ ಹುಡುಗಿಯ ಮದುವೆ ಸಹಾಯ ಧನವನ್ನು ಸುಳ್ಯ ಎಸ್.ವೈ.ಎಸ್ ಅದ್ಯಕ್ಷ ಕತ್ತರ್ ಹಾಜಿಯವರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾ ಕಾರ್ಯದರ್ಶಿ ಕೆಎಲ್ ಉಮರ್ ದಾರಿಮಿ ಶಾಖೆಗಳನ್ನು ರಚಿಸುವುದರ ಕುರಿತು ಸಮಗ್ರ ಮಾಹಿತಿ ನೀಡಿದರು. ಶಾಫಿ ದಾರಿಮಿ ಅಜ್ಜಾವರ ಸ್ವಾಗತಿಸಿದರು. ರಝಾಕ್ ಮುಸ್ಲಿಯಾರ್ ಅಜ್ಜಾವರ ಧನ್ಯವಾದ ಸಮರ್ಪಿಸಿದರು.

Also Read  ಬೆಳೆ ವಿಮೆ ನೋಂದಣಿಗೆ ಅರ್ಜಿ ಆಹ್ವಾನ

error: Content is protected !!
Scroll to Top