ಸುಳ್ಯ :ಎರಡು ಅಂಗಡಿಗಳಿಗೆ ನುಗ್ಗಿ ಕಂಪ್ಯೂಟರ್, ನಗದು ದೋಚಿದ ಕಳ್ಳರು.!

(ನ್ಯೂಸ್ ಕಡಬ) newskadaba.com ಸುಳ್ಯ, ಅ. 13: ಕಳೆದ ರಾತ್ರಿ ಸುಳ್ಯದ ಎರಡು ಕಡೆಗಳಲ್ಲಿ ಕಳ್ಳರು ತಮ್ಮ ಕೈಚಲಕ ತೋರಿದ್ದಾರೆ. ಸುಳ್ಯ ನಗರದ ಎ.ಪಿ.ಎಂ.ಸಿ ವಾಣಿಜ್ಯ ಸಂಕೀರ್ಣದಲ್ಲಿರುವ ಲೋಕೇಶ್ ಕೆರೆಮೂಲೆಯವರ ಮಾಲೀಕತ್ವದ ಗಣೇಶ್ ಟೆಲಿಕಾಂ ಹಾಗೂ ಸುಳ್ಯ ಜೂನಿಯರ್ ಕಾಲೇಜು ಬಳಿ ಸ್ಟೇಶನರಿ ಅಂಗಡಿ ಕಳ್ಳರು ನುಗ್ಗಿ ಕೈಚಳಕ ತೋರಿಸಿದ್ದಾರೆ.

ಎರಡು ಅಂಗಡಿಗಳಿಗೆ ನುಗ್ಗಿರುವ ಕಳ್ಳರ ತಂಡ ಅಂಗಡಿಯೊಳಗಿದ್ದ ಕಂಪ್ಯೂಟರ್ ಸಹಿತ, ಮೊಬೈಲ್ 5. ಸಾವಿರ ನಗದು, ಡ್ರೈ ಫ್ರೂಟ್ಸ್ ಹಾಗೂ ಇನ್ನಿತರ ವಸ್ತುಗಳನ್ನ ಕಳವು ಗೈದಿದ್ದಾರೆ. ಇನ್ನು,ಎಂದಿನಂತೆ ಇಂದು ಮುಂಜಾನೆ ಅಂಗಡಿ ಮಾಲಕರು ಬಂದಾಗ ಕಳವು ಆಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಬಂದು ಮಹಜರು ನಡೆಸಿದ್ದಾರೆ.

Also Read  ಕನಿಷ್ಟ ವೇತನ ಕಾಯಿದೆ ವ್ಯಾಪ್ತಿಗೆ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಉದ್ಯೋಗ

 

error: Content is protected !!
Scroll to Top