ಕಡಬ ತಾ.ಪಂ.ಗೆ ಕಾದಿರಿಸಿದ ಸ್ಥಳ ಪರಿಶೀಲಿಸಿದ ಸುಳ್ಯ ಶಾಸಕ ಎಸ್. ಅಂಗಾರ ➤ ಬೆಳ್ಳಂಬೆಳಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಚ್ಚರಿ..‼️

(ನ್ಯೂಸ್ ಕಡಬ) newskadaba.com ಕಡಬ, ಅ.13. ನೂತನ ಕಡಬ ತಾಲೂಕು ಪಂಚಾಯತ್ ಗೆ ಕಾದಿರಿಸಿದ ಜಾಗವನ್ನು ಸುಳ್ಯ ಶಾಸಕ ಎಸ್.ಅಂಗಾರ ರವರು ಅಧಿಕಾರಿಗಳ ಜೊತೆಗೂಡಿ ಮಂಗಳವಾರ ಬೆಳ್ಳಂಬೆಳಗ್ಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಇಂಜಿನಿಯರ್ ಭರತ್, ಪಂಚಾಯತ್ ಸದಸ್ಯೆ ಪಿ.ವೈ.ಕುಸುಮಾ, ಬಿಜೆಪಿ ಮುಖಂಡರಾದ ವೆಂಕಟ್ ವಳಲಂಬೆ, ಕೃಷ್ಣ ಶೆಟ್ಟಿ ಕಡಬ, ಸೀತಾರಾಮ ಗೌಡ ಪೊಸವಳಿಕೆ, ಮೇದಪ್ಪ ಗೌಡ ಡೆಪ್ಪುಣಿ, ಪ್ರಕಾಶ್ ಎನ್.ಕೆ. ಗಿರೀಶ್ ಎ.ಪಿ. ಮೊದಲಾದವರು ಉಪಸ್ಥಿತರಿದ್ದರು.

Also Read  ರಿಯಾಯಿತಿ ದರದ ಹೊಸ ಬಸ್ಸು ಪಾಸುಗಳ ವಿತರಣೆ

error: Content is protected !!
Scroll to Top