ವಿಚ್ಛೇದನ ಹಿಂಪಡೆಯುತ್ತಿದ್ದೇನೆ – ಕೆ.ಕಲ್ಯಾಣ್ ಪತ್ನಿ ಅಶ್ವಿನಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 12 :ನಾನು ವಿಚ್ಛೇದನ ಪತ್ರವನ್ನು ಹಿಂಪಡೆಯುತ್ತಿದ್ದೇನೆ. ಅದಕ್ಕೆ ಬೇಕಾದ ಸಹಿ ಕೂಡ ಮಾಡಿದ್ದೀನಿ ಎಂದು ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಹೇಳಿದರು. ಶಿವಾನಂದ ವಾಲಿಯನ್ನು ತುಂಬಾ ನಂಬಿದ್ದೆವು. ಆದರೆ ನಮಗೆ ನಂಬಿಕೆ ದ್ರೋಹ ಮಾಡಿದ್ದಾನೆ.

 

 

ನಾವು ಅವರ ಮಾತನ್ನ ಕೇಳಬೇಕು, ಹೇಳಿದ್ದನ್ನು ಮಾಡಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಯಾರನ್ನಾದರೂ ಮನೆಗೆ ಸೇರಿಸಿಕೊಳ್ಳಬೇಕಾದರೆ ಅವರ ಪೂರ್ವಪರ ಮಾಹಿತಿ ಪಡೆದು ಕೆಲಸಕ್ಕೆ ಸೇರಿಸಿಕೊಳ್ಳಿ. ಈ ಘಟನೆಯಿಂದ ಹೊರಗೆ ಬರಲು ನಾನು ಮತ್ತು ನಮ್ಮ ಪೋಷಕರು ಪ್ರಯತ್ನ ಮಾಡುತ್ತಿದ್ದೇವೆ ಎಂದರು.ಇನ್ನೂ ನಾನು ವಿಚ್ಛೇದನ ಪತ್ರವನ್ನು ಹಿಂಪಡೆಯುತ್ತಿದ್ದೇನೆ. ಅದಕ್ಕೆ ಬೇಕಾದ ಸಹಿ ಕೂಡ ಮಾಡಿದ್ದೀನಿ. ನನ್ನ ಮೇಲೆ ಯಾರೋ ಪ್ರಭಾವ ಬೀರಿದ್ದರು.

Also Read  ಚಂದ್ರಯಾನ-3 ನೌಕೆಯ 5ನೇ ಕಕ್ಷೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ - ಆ.1ರಿಂದ ಚಂದ್ರನತ್ತ ಪ್ರಯಾಣ

 

ಈಗ ನಾನು ಚೆನ್ನಾಗಿದ್ದೇನೆ. ಆರೋಪಿ ಶಿವಾನಂದ ನನಗೆ ಮೋಸ ಮಾಡಿದ ಎಂದು ಕೆ.ಕಲ್ಯಾಣ ಪತ್ನಿ ಅಶ್ವಿನಿ ಹೇಳಿದರು.ಆರೋಪಿ ಶಿವನಾಂದ ವಾಲಿ ತಾನು ಹೇಳಿದ್ದ ಮಾತನನ್ನ ಕೇಳುವ ರೀತಿ ನಮ್ಮ ಪರಿಸ್ಥಿತಿ ನಿರ್ಮಾಣ ಮಾಡಿದ್ದ. ಆದರೆ ಏನು ಮಾಡಿದ್ದ ಎಂಬುದು ನನಗೆ ಗೊತ್ತಿಲ್ಲ. ನಾನು ಮತ್ತು ನನ್ನ ಪತಿ ಇಬ್ಬರು ಪರಸ್ಪರ ಭೇಟಿಯಾಗಿ ಮಾತನಾಡಿಲ್ಲ. ಇಬ್ಬರೂ ಭೇಟಿಯಾಗಿ ವೈಯಕ್ತಿಕವಾಗಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ.

 

error: Content is protected !!
Scroll to Top