ಪುತ್ತೂರು : ಗೃಹರಕ್ಷಕ ದಳದ ಜಗನ್ನಾಥ್ ಸಾರ್ಜೆಂಟ್ ಆಗಿ ಪದೋನ್ನತಿ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 12: ಗೃಹರಕ್ಷಕ ದಳದವರು ಇತರರಂತಲ್ಲ, ಅವರ ಮೇಲೆ ಸಾಮಾಜಿಕ ಹೊಣೆಗಾರಿಕೆಯ ಜವಾಬ್ದಾರಿ ಇದೆ. ಪ್ರಸ್ತುತ ದಿನದಲ್ಲಿ ತಮ್ಮ ಕರ್ತವ್ಯದ ಜೊತೆಗೆ ಕೋವಿಡ್-19ಗೆ ಸಂಬಂಧಿಸಿ ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿ, ಪ್ರೀತಿ ಮತ್ತು ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರು ಅವರು ಹೇಳಿದರು.

 

 

ಪುತ್ತೂರು ಗೃಹರಕ್ಷಕ ದಳದಲ್ಲಿ ಸೆಕ್ಷನ್ ಲೀಡರ್ ಆಗಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಇದೀಗ ಸಾರ್ಜೆಂಟ್ ಆಗಿ ಪದೋನ್ನತಿಗೊಂಡ ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ಭದ್ರತಾ ಸಿಬ್ಬಂದಿ ಜಗನ್ನಾಥರವರಿಗೆ ಸಾರ್ಜೆಂಟ್ ಪಟ್ಟಿ ತೊಡಿಸಿ ಅವರು ಮಾತನಾಡಿದರು. ಜನರು ಗೃಹರಕ್ಷಕ ದಳದವರನ್ನು ಹೆಚ್ಚಾಗಿ ಗಮನಿಸುತ್ತಾರೆ. ಯಾಕೆಂದರೆ ಜನರಲ್ಲಿ ಹೆಚ್ಚು ಬೇgಯುವವರು ಗೃಹರಕ್ಷಕ ದಳದವರು ಇವತ್ತು ಮೇಲಾಧಿಕಾರಿಗಳಿಂದ ಬಂದಿರುವ ಆದೇಶದಂತೆ ಗೃಹರಕ್ಷಕ ದಳದವರು ಹೆಚ್ಚು ಮುತುವರ್ಜಿಯಿಂದ ತೊಡಗಿಸಿಕೊಳ್ಳಬೇಕು. ವಾಹನ ಸವಾರರು ಪೊಲೀಸರು ಇದ್ದರೆ ಮಾತ್ರ ಹೆಲ್ಮೆಟ್, ಸೀಟ್ ಬೆಲ್ಟ್ ಹಾಕುವುದು ಮಾತ್ರವಲ್ಲ ಪೊಲೀಸರು ಇಲ್ಲದಿದ್ದರೂ ಕಾನೂನು ಪಾಲನೆ ಮಾಡುವಂತಾಗಬೇಕು.

Also Read  ನಮ್ಮ ಮೆಟ್ರೋ ಪಿಲ್ಲರ್ ಕುಸಿತ ದುರಂತ..! ➤ 5-6 ದಿನಗಳಲ್ಲಿ ಐಐಎಸ್ಸಿಯಿಂದ ವರದಿ ಸಲ್ಲಿಕೆ

 

ಕೋವಿಡ್ ಹಿನ್ನಲೆಯಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ ದಂಡದ ಭಯದ ಬದಲು ಪ್ರೀತಿ ಹಾಗೂ ಪ್ರಾಮಾಣಿಕತೆ ಮೂಲಕ ಜನರಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಿ ಅವರು ಮಾಸ್ಕ್ ಧರಿಸುವಂತೆ ಮಾಡುವ ದೊಡ್ಡ ಜವಾಬ್ದಾರಿ ಗೃಹರಕ್ಷಕಳದವರ ಮೇಲಿದೆ ಎಂದರು. ಗೃಹರಕ್ಷಕ ದಳದ ಪುತ್ತೂರು ಘಟಕಾಧಿಕಾರಿ ಅಭಿಮನ್ಯು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಪ್ರಭಾರ ಘಟಕಾಧಿಕಾರಿ ಸಂತೋಷ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸತ್ಯನಾರಾಯಣ್ ಮತ್ತು ವಿಠಲ್ ನಾಯ್ಕ್ ಅತಿಥಿಗಳನ್ನು ಗೌರವಿಸಿದರು. ಧನುಷಾ ಟಿ. ಪ್ರಾರ್ಥಿಸಿದರು. ಕವಿತಾ ಸ್ವಾಗತಿಸಿದರು. ಕಾವ್ಯ ವಂದಿಸಿದರು.

 

ಈ ಸಂದರ್ಭದ್ಲಲಿ ಕೋವಿಡ್ ಜಾಗೃತಿ ಪುಸ್ತಕ ವಿತರಣೆ: ಕೋವಿಡ್ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಯಾವ ರೀತಿಯಲ್ಲಿ ಮುಂಜಾಗರೂಕತೆ ವಹಿಸಬೇಕು ಮತ್ತು ಕೋವಿಡ್ ಪ್ರಾಥಮಿಕ ಸಂಪರ್ಕಿತರೊಂದಿಗೆ ಯಾವ ರೀತಿ ಇರಬೇಕು. ಕೋವಿಡ್ ಹಿನ್ನಲೆಯಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೇಗೆ ವೃದ್ದಿಸಬೇಕೆಂಬ ಕುರಿತ ಕೋವಿಡ್ ಜಾಗೃತಿ ಪುಸ್ತಕವನ್ನು ಗೃಹರಕ್ಷಕ ಸಿಬ್ಬಂದಿಗಳಿಗೆ ವಿತರಣೆ ಮಾಡಲಾಯಿತು.

Also Read  ತಾಲೂಕು ಕಛೇರಿಗೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಭೇಟಿ

 

 

error: Content is protected !!
Scroll to Top