(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಸೆ.23. ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಆತೂರು ಎಂಬಲ್ಲಿ ಸ್ಕಾರ್ಪಿಯೋ ಕಾರೊಂದರಲ್ಲಿ ಬಂದ ತಂಡವೊಂದು ದನ ಕಳ್ಳತನಕ್ಕೆ ಯತ್ನಿಸಿದ ಘಟನೆ ಕಳೆದ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸ್ಕಾರ್ಪಿಯೋ ಕಾರಿನಲ್ಲಿ ಬಂದ ಮುಸುಕು ದಾರಿಗಳು ತಲೆಗೆ ಹೆಲ್ಮೆಟ್ ಧರಿಸಿ ಬಳಿಕ ಬಟ್ಟೆಯಿಂದ ಮುಸುಕು ಕಟ್ಟಿಕೊಂಡಿದ್ದು ರಾತ್ರಿ ವೇಳೆ ಅಂಗಡಿದಾರರು ಹಾಲು ಬರುತ್ತದೆ ಎಂದು ಅಂಗಡಿಯಲ್ಲಿ ಇದ್ದ ವೇಳೆ ಈ ಘಟನೆ ಸಂಭವಿಸಿದ್ದು ಅಂಗಡಿದಾರರಿಗೆ ದನ ಕಳ್ಳರು ಬೆದರಿಕೆ ಒಡ್ಡಿ ಸ್ಥಳದಲ್ಲಿರುವ ಸೋಡದ ಬಾಟಲಿಯನ್ನು ಹುಡಿ ಮಾಡಿ ಹಾನಿಗೊಳಿಸಿದ್ದಾರೆ. ಸ್ಥಳೀಯ ಅಕ್ರಮ ಕಸಾಯಿಖಾನೆಯವರೊಂದಿಗೆ ಸಂಬಂಧ ಹೊಂದಿರುವ ಈ ಕಳ್ಳರು ಈ ಸ್ಕಾರ್ಪಿಯೋ ಕಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆರೋಪ ವ್ಯಕ್ತವಾಗಿದೆ.
ಅಕ್ರಮ ಕಸಾಯಿಖಾನೆ? ಕೊೖಲ, ರಾಮಕುಂಜ, ಆತೂರು ಸೇರಿದಂತೆ ಕೆಲವು ಅಕ್ರಮ ಕಸಾಯಿಖಾನೆಗಳು ಕಾರ್ಯಚರಿಸುತ್ತದ್ದವು. ಜಿಲ್ಲೆಯ ಕೆಲವು ಮಾಂಸದ ಅಂಗಡಿಗಳಿಗೆ ಈ ಪರಿಸರದಿಂದ ಬೆಳ್ತಂಗಡಿ ತಾಲೂಕಿನ ಕುಪ್ಪೆಟಿ ಮೂಲದ ವ್ಯಕ್ತಿಯೋರ್ವರ ಮೂಲಕ ಮಾಂಸ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಒಪ್ಪಂದದಂತೆ ಮಾಂಸ ಮಾಡಲು ಜಾನುವರ ಸಿಗದ ವೇಳೆಯಲ್ಲಿ ಐಶಾರಾಮಿ ವಾಹನ ಬಳಸಿಕೊಂಡು ರಾತ್ರಿ ವೇಳೆಯಲ್ಲಿ ದನಗಳ ಕಳ್ಳತನಕ್ಕೆ ಮುಂದಾಗುತ್ತಾರೆ ಎಂಬ ವಿಚಾರವು ಕೇಳಿಬರುತ್ತದೆ. ಉಪ್ಪಿನಂಗಡಿ, ಪುತ್ತೂರು, ಕಡಬ ಠಾಣಾ ಪೊಲೀಸರು ಈ ಬಗ್ಗೆ ನಿಗಾ ವಹಿಸಿ ಕಸಾಯಿಖಾನೆಯ ವಿರುದ್ಧ ತನಿಖೆಗೆ ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ಥಳೀಯ ಪೊಲೀಸರು ಕಸಾಯಿಖಾನೆಗಳ ವಿರುದ್ಧ ಮೌನವಿರುವುದೇ ಜಾನುವರು ಕಳ್ಳರಿಗೆ ವರದಾನವಾಗಿದೆ ಎನ್ನಲಾಗಿದೆ.