ವಿಜಯಲಕ್ಷ್ಮಿ ದರ್ಶನ್‍ಗೆ ಉದಯೋನ್ಮುಖ ಮಹಿಳಾ ಉದ್ಯಮಿ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 12: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಆ್ಯಕ್ಟಿವ್ ಆಗಿದ್ದಾರೆ. ಅಂತೆಯೇ ಇದೀಗ ಅವರು ತಮ್ಮ ಅಭಿಮಾನಿಗಳ ಜೊತೆ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವಿಜಯಲಕ್ಷ್ಮಿ ಹೊಸ ಉದ್ಯಮವನ್ನು ಆಂಭಿಸಿದ್ದರು. ‘ಮೈ ಫ್ರೆಶ್ ಬಾಸ್ಕೆಟ್’ ಎಂಬ ಆನ್ ಲೈನ್ ಆ್ಯಪ್ ಒಂದನ್ನು ತೆರೆದು ರೈತರಿಗೆ ನೆರವಾಗಿದ್ದರು. ಆ ಆ್ಯಪ್ ಮೂಲಕ ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡಬಹುದಾಗಿತ್ತು. ಅಲ್ಲದೆ ಗ್ರಾಹಕರಿಗೂ ರೈತರಿಂದ ನೇರವಾಗಿ ತರಕಾರಿ ಹಾಗೂ ಹಣ್ಣುಗಳು ತಲುಪುತ್ತಿದ್ದವು. ಹೀಗೆ ರೈತರಿಗೆ ನೆರವಾಗುವ ಸಲುವಾಗಿ ವಿಜಯಲಕ್ಷ್ಮಿ ಅವರು ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ವಿಜಯಲಕ್ಷ್ಮಿ ಅವರು ಹೊಸದಾಗಿ ಆರಂಭಿಸಿರುವ ಆನ್‍ಲೈನ್ ಉದ್ಯಮಕ್ಕೆ ಸಂಬಂಧಪಟ್ಟಂತೆ ಇದೀಗ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

Also Read  ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ ➤ 2020ರ ಕುರಿತು ಸ್ಪಷ್ಠೀಕರಣಗಳು

 

ಟೈಮ್ಸ್ ಬ್ಯುಸಿನೆಸ್ ನವರು ಉದಯೋನ್ಮುಖ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿಯನ್ನು ವಿಜಯಲಕ್ಷ್ಮಿ ಅವರಿಗೆ ನೀಡಿ ಸನ್ಮಾನಿಸಿದ್ದಾರೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಜೊತೆಗೆ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತೋಷ ಹಂಚಿಕೊಂಡಿದ್ದಾರೆ.

 

 

error: Content is protected !!
Scroll to Top