ವಿಟ್ಲದಲ್ಲಿ ಒಂಟಿ ಮಹಿಳೆಯ ಮನೆಗೆ ನುಗ್ಗಿ ದರೋಡೆ, ಹಲ್ಲೆ ಪ್ರಕರಣ ➤ ಉತ್ತರ ಪ್ರದೇಶ ಮೂಲದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 12: ಕಳೆದ ಮೂರು ದಿನಗಳ ಹಿಂದೆ ವಿಟ್ಲದಲ್ಲಿ ಒಂಟಿ ಮಹಿಳೆಯ ಮನೆಗೆ ದಾಳಿ ನಡೆಸಿ, ಹಲ್ಲೆ ಮಾಡಿದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ಉತ್ತರ ಪ್ರದೇಶದ ಸಹರನಪುರ ಜಿಲ್ಲೆ ನಿವಾಸಿ ಜುಬೈರ್ ಅಹಮ್ಮದ್ (24) ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ವರುಷಗಳಿಂದ ವಿಟ್ಲದ ಮೇಗಿನಪೇಟೆಯಲ್ಲಿರು ಪೀಠೋಪಕರಣ ತಯಾರಿಕ ಕಾರ್ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾನೆ. ಮೂರು ದಿನಗಳಿಂದ ಮಹಿಳೆಯ ಮನೆಯ ಮುಂದೆ ಅನುಮಾನಾಸ್ಪದವಾಗಿ ಓಡಾಡಿದ ಬಗ್ಗೆ ಮಹಿಳೆ ನೀಡಿದ ಮಾಹಿತಿ ಆಧಾರದಲ್ಲಿ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ವಿಟ್ಲ ಪೊಲೀಸರ ತಂಡ ಯಶಸ್ವಿಯಾಗಿದೆ. ಕೃತ್ಯ ಕ್ಕೆ ಬಳಸಿದ ವಸ್ತುಗಳನ್ನ ಹಾಗೂ ಮೊಬೈಲ್ ನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕೃತ್ಯಕ್ಕೆ ಮೂರು ದಿನಗಳಿಂದ ಸ್ಕೆಚ್ ಹಾಕಿದ್ದೆ ಎಂದು ತನಿಖೆಯಲ್ಲಿ ಆರೋಪಿ ಬಾಯಿ ಬಿಟ್ಟಿದ್ಧಾನೆ.

Also Read  ಲೋಕಾಯುಕ್ತರಿಂದ ಕೆರೆಗಳ ಪರಿಶೀಲನೆ ಕಾರ್ಯ             ಒತ್ತುವರಿ ತೆರವುಗೊಳಿಸುವಂತೆ ಆದೇಶ

 

error: Content is protected !!
Scroll to Top