ಮೂಡಬಿದ್ರೆ :ಮೃತ ದೇಹವನ್ನು ಬಾವಿಯಿಂದ ಮೇಲೆತ್ತಿ ಮಾನವೀಯತೆ ಮೆರೆದ ಖಾಕಿ ಅಧಿಕಾರಿ

(ನ್ಯೂಸ್ ಕಡಬ) newskadaba.com ಮೂಡಬಿದ್ರೆ, ಅ. 12: ಕಳೆದ ಮೂರು ನಾಲ್ಕು ವರುಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಕಳೆದ ದಿನ ನಡೆದಿದೆ. ಇವರ ಮೃತ ದೇಹವನ್ನು ಪೊಲೀಸ್ ಅಧಿಕಾರಿಯೊಬ್ಬರು ಬಾವಿಯಿಂದ ಮೇಲೆತ್ತುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ವಿಜಯ ಕರ್ಕೇರ (47ವ) ಕಳೆದ 3-4 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ವಿಜಯ ಕರ್ಕೇರಾ ಮನೆಯಲ್ಲಿ ಕಾಣದಿದ್ದಾಗ, ಮನೆಯವರು ಹುಡುಕಾಡಿದ್ದಾರೆ. ಬಾವಿಯ ಬಳಿ ನೋಡಿದಾಗ ವಿಜಯ ಅವರ ವಸ್ತ್ರವಿರುವುದು ಕಂಡುಬಂದಿದ್ದು, ಬಾವಿಗೆ ಇಣುಕಿ ನೋಡಿದಾಗ ಮೃತದೇಹ ಪತ್ತೆಯಾಗಿದೆ.ವಿಜಯ್ ಅವರ ಸಹೋದರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ನಿರೀಕ್ಷರು ಬಿ.ಎಸ್.ದಿನೇಶ್ ಕುಮಾರ್ ಶವವನನ್ನು ಮೇಲಕ್ಕೆ ಎತ್ತಿದರು.ಶವವನ್ನು ಶ್ರಮ ವಹಿಸಿ ಬಾವಿಯಿಂದ ಹೊರಗೆ ತೆಗೆದಿದ್ದಾರೆ. ಸಿಬ್ಬಂದಿಗಳು ಹಾಗೂ ಸ್ಥಳೀಯರು ಸಹಕರಿಸಿದ್ದಾರೆ.

Also Read  ಪತ್ರಕರ್ತರಿಗೆ ಆಹ್ವಾನ

error: Content is protected !!
Scroll to Top