ಕೆಪಿಸಿಸಿ ಮಾಧ್ಯಮ ವಕ್ತಾರರಾಗಿ ಆಯ್ಕೆಯಾದ ಶವಾದ್ ಗೂನಡ್ಕರವರಿಗೆ ಹುಟ್ಟೂರ ಸನ್ಮಾನ

(ನ್ಯೂಸ್ ಕಡಬ) newskadaba.com ಸುಳ್ಯ, ಅ. 12. ಅತೀ ಕಿರಿಯ ವಯಸ್ಸಿನಲ್ಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಕ್ತಾರರಾಗಿ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರಿಂದ ನೇಮಕಗೊಂಡ ವಿದ್ಯಾರ್ಥಿ ನಾಯಕ ಶವಾದ್ ಗೂನಡ್ಕರವರಿಗೆ ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಹುಟ್ಟೂರ ಸನ್ಮಾನ ಜರುಗಿತು.


ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷರಾದ ಸೋಮಶೇಖರ್ ಕೊಯಂಗಾಜೆಯವರು ಗೂನಡ್ಕ ನಾಗರಿಕರ ಪರವಾಗಿ ಶವಾದ್ ಗೂನಡ್ಕರವರನ್ನು ಸಮ್ಮಾನಿಸಿ ಗೌರವಿಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶವಾದ್ ಗೂನಡ್ಕರವರು “ನನ್ನ ಹುಟ್ಟೂರಿನ ಜನರ ಪ್ರೀತಿ, ವಿಶ್ವಾಸ ಹಾಗೂ ಆದರಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನೂರಿನ ಜನರ ಸಮಸ್ಯೆಗಳಿಗೆ ಮಂಗಳೂರಿನಲ್ಲಿದ್ದುಕೊಂಡು ನಾನು ಸದಾ ಸ್ಪಂದಿಸಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ, ಪ್ರಾರ್ಥನೆಯ ಫಲವಾಗಿ ಇಂದು ಕಿರಿಯ ವಯಸ್ಸಿನಲ್ಲೇ ನನ್ನನ್ನು ಗುರುತಿಸಿ ಡಿ.ಕೆ. ಶಿವಕುಮಾರ್ ರವರು ಈ ಮಹತ್ವದ ಜವಾಬ್ದಾರಿಯನ್ನು ನೀಡಿದ್ದಾರೆ” ಎಂದರು.

Also Read  ನೈರುತ್ಯ ಕ್ಷೇತ್ರದ ಮತದಾರರ ಕರಡು ಪಟ್ಟಿ ನ.21ರಂದು ಪ್ರಕಟ: ಅಪರ ಜಿಲ್ಲಾಧಿಕಾರಿ ► ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗಿದೆ

ಕರ್ನಾಟಕ ರಾಜ್ಯ ಕಾರ್ಮಿಕರ ಫೆಡರೇಶನ್, ಸುಳ್ಯ ಇದರ ಗೌರವಾಧ್ಯಕ್ಷರಾದ ಕೆ.ಪಿ. ಜಾನಿಯವರು ಅಭಿನಂದನಾ ಭಾಷಣ ಮಾಡಿದರು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಕೆ.ಆರ್.ಜಗದೀಶ್ ರೈ, ಮಹಮ್ಮದ್ ಕುಂಞ ಗೂನಡ್ಕ, ಜಿ.ಕೆ. ಹಮೀದ್, ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರುಗಳಾದ ಮೋಹಿನಿ ವಸಂತ ಗೌಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಆಶಾ ವಿನಯ್ ಕುಮಾರ್, ಮುಖಂಡರುಗಳಾದ ದಿನಕರ್ ಗೌಡ ಸಣ್ಣಮನೆ, ತಾಜ್ ಮಹಮ್ಮದ್, ವಸಂತ ಗೌಡ ಪೆಲ್ತಡ್ಕ, ಎಸ್.ಕೆ.ಹನೀಫ್, ಬಾಲಚಂದ್ರ, ವಿನಯ್ ಕುಮಾರ್, ಜಿ.ಜಿ.ನವೀನ, ರಾಜು ನೆಲ್ಲಿಕುಮೇರಿ, ತಾಜುದ್ದೀನ್ ಅರಂತೋಡು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆಯೋಜಕರಾದ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪಿ.ಕೆ.ಅಬೂಸಾಲಿ ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ತುಮಕೂರು: ಇಬ್ಬರು ವಿಕಲಚೇತನ ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

error: Content is protected !!
Scroll to Top