ಖ್ಯಾತ ಸಂಗೀತ ನಿರ್ದೇಶಕ ರಾಜನ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 12: ಖ್ಯಾತ ಸಂಗೀತ ನಿರ್ದೇಶಕ ರಾಜನ್(87) ಹೃದಯಾಘಾತದಿಂದ ಕಳೆದ ದಿನ ,ರಾತ್ರಿ 11 ಗಂಟೆಗೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಆರ್.ಟಿ.ನಗರದ ನಿವಾಸದಲ್ಲಿ ರಾಜನ್ ಕೊನೆಯುಸಿರೆಳೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ತುಳು ಸೇರಿ ಹಲವು ಭಾಷೆಯ 375ಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.

 

ರಾಜನ್-ನಾಗೇಂದ್ರ ಎಂದೇ ಖ್ಯಾತವಾಗಿದ್ದ ಸಹೋದರರ ಪೈಕಿ ಸಂಗೀತ ನಿರ್ದೇಶಕ ರಾಜನ್ ಹಿರಿಯರಾಗಿದ್ದರು. 1950-1990ರವರೆಗೆ ಈ ಸಹೋದರರು ಮೋಡಿ ಮಾಡಿದ್ದರು. ಗಂಧದ ಗುಡಿ, ಎರಡು ಕನಸು, ಪರಸಂಗದ ಗೆಂಡೆತಿಮ್ಮ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಹೊಂಬಿಸಿಲು, ಗಾಳಿಮಾತು, ಶ್ರೀನಿವಾಸ ಕಲ್ಯಾಣ, ಚಲಿಸುವ ಮೋಡಗಳು ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದರು.ಕನ್ನಡದಲ್ಲೇ 200ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ, ಹೆಬ್ಬಾಳದ ಸ್ಮಶಾನದಲ್ಲಿ ಇಂದು ರಾಜನ್ ಅಂತ್ಯಸಂಸ್ಕಾರ ನಡೆಯಲಿದೆ.

Also Read  ರಾಜ್ಯಮಟ್ಟದ ವೈಟ್ ಲಿಪ್ಟಿಂಗ್ ಸ್ಪರ್ಧೆ ➤ ಪ್ರಥಮ ಸ್ಥಾನ ಪಡೆದ ಮರ್ಧಾಳದ ಬ್ಯೂಲ ಪಿ.ಟಿ

 

error: Content is protected !!
Scroll to Top