ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಆಸ್ಪತ್ರೆಗೆ ದಾಖಲು!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 11: ಶಿಕ್ಷಣ ಸಚಿವ ಸುರೇಶ್ ಕುಮಾರ್ ಭಾನುವಾರ ಮುಂಜಾನೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊರೊನಾ ಸೋಂಕು ಧೃಡಪಟ್ಟ ಬಳಿಕ ಹೋಂ ಐಸೋಲೇಷನ್ ನಲ್ಲಿದ್ದ ಸಚಿವರು ಇದೀಗ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.

 

“ಕಳೆದ ಸೋಮವಾರದಿಂದ ನಾನು ಕೋವಿಡ್ 19 ವೈರಸ್ ಪೀಡಿತನಾಗಿ ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ. ವೈದ್ಯರ ಸಲಹೆ ಮೇರೆಗೆ ನಾನು ಈಗ ಬೆಂಗಳೂರಿನಲ್ಲಿಯೇ ಗೆಳೆಯರೊಬ್ಬರ ಚಿಕ್ಕ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದೇನೆ. ವೈದ್ಯರ ನಿಗಾದಲ್ಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಎಲ್ಲಾ ರೀತಿಯಿಂದಲೂ ನನ್ನ ಆರೋಗ್ಯ ಸುಧಾರಿಸುತ್ತಿದೆ” ಎಂದು ತಿಳಿಸಿದ್ದಾರೆ.

Also Read  ನೂಜಿಬಾಳ್ತಿಲ: ಉ.ಹಿ.ಪ್ರಾ ಶಾಲೆಗೆ ಸಂಸದ ನಳಿನ್ ಕುಮಾರ್ ಬೇಟಿ ►ಶಾಲಾ ಕಟ್ಟಡ ದುರಸ್ತಿಗೆ ಎಸ್.ಡಿ.ಎಂ.ಸಿ.ಯಿಂದ ಮನವಿ

error: Content is protected !!
Scroll to Top