ಮಂಗಳೂರು ವಿವಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ➤ ತನಿಖಾ ವರದಿ ಮುಚ್ಚಿಟ್ಟು ಎಡವಟ್ಟು!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 11:ಮೂರು ವರ್ಷ ಹಿಂದೆ ವಿವಿಯ ಅರ್ಥಶಾಸ್ತ್ರ ವಿಭಾಗದ ಪ್ರೊ.ಆರಬಿ ಎಂಬವರು ತರಗತಿ ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭ ವಿದ್ಯಾರ್ಥಿನಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದರು. ಈ ಬಗ್ಗೆ ವಿದ್ಯಾರ್ಥಿನಿ ವಿಶ್ವ ವಿದ್ಯಾಲಯಕ್ಕೆ ದೂರು ನೀಡಿದ್ದಳು. ಆದರೆ ದೂರಿನ ಬಗ್ಗೆ ವಿಚಾರಣೆ ನಡೆಸುವ ಬದಲು ಅಂದಿನ ಕುಲಸಚಿವ ಡಾ. ಎ.ಎಂ. ಖಾನ್‌ ಘಟನೆಯನ್ನು ಮುಚ್ಚಿಡುವ ಪ್ರಯತ್ನ ಮಾಡಿದ್ದರು.

 

ಪ್ರಕರಣವನ್ನು ಮುಚ್ಚಿಡಲು ಪ್ರಯತ್ನ ನಡೆಯುತ್ತಿರುವುದನ್ನು ಗಮನಿಸಿದ್ದ ವಿದ್ಯಾರ್ಥಿನಿ ನೇರವಾಗಿ ರಾಜ್ಯ ಮಹಿಳಾ ಆಯೋಗದ ಮೊರೆ ಹೋಗಿದ್ದಳು. ತಕ್ಷಣ ಸ್ಪಂದಿಸಿದ ಮಹಿಳಾ ಆಯೋಗ ವಿಶ್ವವಿದ್ಯಾಲಯದಿಂದ ವರದಿ ಕೇಳಿದೆ. ಈ ಸಂದರ್ಭ ಎಚ್ಚೆತ್ತುಕೊಂಡ ವಿಶ್ವವಿದ್ಯಾಲಯ ಆಂಗ್ಲಭಾಷಾ ವಿಭಾಗದ ಪ್ರಾಧ್ಯಾಪಕಿ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿಯೊಂದನ್ನು ನೇಮಿಸಿ ತನಿಖೆಗೆ ಆದೇಶ ನೀಡಿತ್ತು.ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯ ಹೇಳಿಕೆಯನ್ನು ದಾಖಲಿಸಿ ಲೈಂಗಿಕ ದೌರ್ಜನ್ಯ ನಡೆದಿರುವುದು ಹೌದು ಎಂದು ಉಲ್ಲೇಖಿಸಿ 2018ರ ಡಿಸೆಂಬರ್‌ನಲ್ಲಿ ವಿಶ್ವವಿದ್ಯಾಲಯಕ್ಕೆ ವರದಿ ಸಲ್ಲಿಸಿದೆ.

Also Read  ತಾಪಮಾನ ಏರಿಕೆ ➤ ವಿದ್ಯಾರ್ಥಿಗಳಿಗೆ ಬೆಳಗ್ಗೆ 11ರಿಂದ ಮದ್ಯಾಹ್ನ 3ರವರೆಗೆ ಹೊರಾಂಗಣ ಆಟ ನಿಷೇಧ

ಆದರೆ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಡಾ. ಎ.ಎಂ. ಖಾನ್‌ ಅವರು ವರದಿಯನ್ನು ರಾಜ್ಯ ಮಹಿಳಾ ಆಯೋಗಕ್ಕೆ ಸಲ್ಲಿಸದೆ ಕಚೇರಿಯ ಕಪಾಟಿನಲ್ಲಿ ಇಟ್ಟು ಎಡವಟ್ಟು ಮಾಡಿಕೊಂಡಿದ್ದರು. ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದಂತಹ ಗಂಭೀರ ಪ್ರಕರಣದ ವರದಿಯನ್ನು ಮುಚ್ಚಿಟ್ಟು ಆರೋಪಿಗೆ ಶಿಕ್ಷೆ ಆಗದಂತೆ ತಡೆದದ್ದು ದೊಡ್ಡ ಪ್ರಮಾದವಾಗಿದ್ದು, ಮುಂದೆ ಮಹಿಳಾ ಆಯೋಗ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಆರೋಪಿ ಸ್ಥಾನದಲ್ಲಿರುವ ಪ್ರೊ. ಆರಬಿ ಹಾಗೂ ಕಡತವನ್ನು ಮುಚ್ಚಿಟ್ಟ ಆರೋಪ ಹೊತ್ತಿರುವ ಡಾ. ಎ.ಎಂ. ಖಾನ್‌ ಭವಿಷ್ಯ ನಿರ್ಧಾರವಾಗಲಿದೆ.

Also Read  ಮಹಿಳಾ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಲವು ಉದ್ಯೋಗಗಳು - ಅರ್ಜಿ ಆಹ್ವಾನ

 

 

error: Content is protected !!
Scroll to Top