ಧರ್ಮಸ್ಥಳ :ಕಾರುಣ್ಯ ಟ್ರೆಡರ್ಸ್‍ನಿಂದ ಅಡಿಕೆ ಕದ್ದ ಆರೋಪಿ ಖಾಕಿ ಬಲೆಗೆ



(ನ್ಯೂಸ್ ಕಡಬ) newskadaba.com ಧರ್ಮಸ್ಥಳ, ಅ. 11: ಕಳೆಂಜ ಗ್ರಾಮದ ಕಾಯರ್ತಡ್ಕದ ಕಾರುಣ್ಯ ಟ್ರೆಡರ್ಸ್ ಎಂಬ ಅಡಿಕೆ ಅಂಗಡಿಯಿಂದ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ.





 

ಸೆ. 30 ರಂದು ಕಾಯರ್ತಡ್ಕದ ಸಿದ್ಧಿಕ್ ಆಲಿಗೆ ಸೇರಿರುವ ಕಾರುಣ್ಯ ಟ್ರೆಡರ್ಸ್‍ನಲ್ಲಿ ರಾತ್ರಿ ಅಂಗಡಿಯ ಬಾಗಿಲಿನ ಬೀಗ ಮುರಿದು ಬರೋಬ್ಬರಿ 1.50 ಲಕ್ಷಕ್ಕೂ ಅಧಿಕ ಮೌಲ್ಯದ 65 ಕೆ.ಜಿ ಅಡಿಕೆಯನ್ನು ಕದ್ದುಕೊಂಡು ಹೋಗಿದ್ದ ಘಟನೆ ನಡೆದಿತ್ತು. ಈ ಸಂಭಂದ ಪ್ರಕರಣ ದಾಖಲಾಗಿತ್ತು. ಇದೀಗಾ ಪ್ರಕರಣ ಸಂಬಂಧ ಆರೋಪಿ ರೆಖ್ಯ ಗ್ರಾಮದ ವಿನೋದ್ ನನ್ನು ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದುಕೊಂಡು ಕಳವು ಗೈದಿರುವ ಅಡಿಕೆಯನ್ನು ವಶ ಪಡಿಸಿಕೊಂಡಿದ್ದಾರೆ. ಇನ್ನು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.






 

 

error: Content is protected !!
Scroll to Top