ಬರೋಬ್ಬರಿ 70 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 11: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 70 ಲಕ್ಷದ ಗಡಿ ದಾಟಿದ್ದು, 60,77,977 ಮಂದಿ ಗುಣಮುಖರಾಗಿದ್ದಾರೆ.ಕಳೆದ 24 ಗಂಟೆಯಲ್ಲಿ 74,383 ಹೊಸ ಪ್ರಕರಣಗಳು ವರದಿಯಾಗಿದ್ದು, 918 ಸೋಂಕಿತರನ್ನ ಕೊರೊನಾ ಬಲಿ ಪಡೆದುಕೊಂಡಿದೆ. ಸದ್ಯ ದೇಶದಲ್ಲಿ 8,67,496 ಸಕ್ರಿಯ ಪ್ರಕರಣಗಳಿದ್ದು, ಸಾವನ್ನಪ್ಪಿದವರ ಸಂಖ್ಯೆ 1,08,334ಕ್ಕೆ ಏರಿಕೆಯಾಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಗಳು ಕಾಣಿಸುತ್ತಿಲ್ಲ. ನಿನ್ನೆಯೂ ಮಹಾರಾಷ್ಟ್ರದಲ್ಲಿ 11,416 ಮಂದಿಗೆ ಸೋಂಕು ತಗುಲಿದ್ದು, 308 ಜನರು ಮರಣ ಹೊಂದಿದ್ದಾರೆ. ಕೊರೊನಾ ಪೀಡಿತ ರಾಜ್ಯಗಳ ಪೈಕಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಎರಡು, ಮೂರನೇ ಸ್ಥಾನದಲ್ಲಿವೆ. ಆಂಧ್ರ ಪ್ರದೇಶದಲ್ಲಿ 46,624 ಸಕ್ರಿಯ ಪ್ರಕರಣಗಳಿದ್ರೆ, ಕರ್ನಾಟಕದಲ್ಲಿ 1,20,948 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

Also Read  ಶಾಲಾ- ಕಾಲೇಜುಗಳು ಮರು ಪ್ರಾರಂಭದ ಕುರಿತು ನಿರ್ಧಾರ‌ವಾಗಿಲ್ಲ ➤ ಶಿಕ್ಷಣ ಸಚಿವರಿಂದ ಸ್ಪಷ್ಟನೆ

 

error: Content is protected !!
Scroll to Top