ಅಕ್ರಮ ಗಣಿಗಾರಿಕೆ ಮೇಲೆ ಅಧಿಕಾರಿಗಳ ದಾಳಿ ➤ 30 ಲಾರಿ 5 ಜೆಸಿಬಿ ಸೀಜ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 11 : ಅಕ್ರಮ ಗಣಿಗಾರಿಕೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ 30 ಲಾರಿ ಹಾಗೂ 5 ಜೆಸಿಬಿಗಳನ್ನು ಮಂಗಳೂರಿನ ಮುಡಿಪು ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮ ಮಣ್ಣು ಮಾರಾಟ ದಂಧೆ ನಡೆಯುತ್ತಿದ್ದ ಮಂಗಳೂರು ಹೊರವಲಯದ ಮುಡಿಪು ಪ್ರದೇಶದ ಮೇಲೆ ಸಹಾಯಕ ಕಮಿಷನರ್​ ದಾಳಿ ನಡೆಸಿ 30ಕ್ಕೂ ಹೆಚ್ಚು ಲಾರಿಗಳು, 5 ಜೆಸಿಬಿ, ಹಿಟಾಚಿಗಳನ್ನು ಸೀಜ್​ ಮಾಡಿದ್ದಾರೆ. ಮಂಗಳೂರಿನ ಹೊರವಲಯದ ಮುಡಿಪು, ಪಜೀರು, ಕೈರಂಗಳ, ಬಾಳೆಪುಣಿ, ಕೋಣಾಜೆ ಗ್ರಾಮಗಳಲ್ಲಿ ದೊಡ್ಡ ಮಟ್ಟದಲ್ಲಿ ಬಾಕ್ಸೈಟ್​ ಗಣಿಗಾರಿಕೆ ನಡೆಯುತ್ತಿತ್ತು. ದೊಡ್ಡ ದೊಡ್ಡ ಲಾರಿ ಮತ್ತು ಕಂಟೈನರ್​ಗಳಲ್ಲಿ ಮಣ್ಣನ್ನು ತುಂಬಿ ತಮಿಳುನಾಡು, ಆಂಧ್ರ ಪ್ರದೇಶಗಳಿಗೆ ಮಾರಾಟ ಮಾಡಲಾಗುತ್ತಿತ್ತು.

Also Read  ಕಡಬ: ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮಲಗಿದ್ದ ಚಾಲಕ ಮೃತ್ಯು ► ಹೃದಯಾಘಾತದ ಶಂಕೆ

error: Content is protected !!
Scroll to Top