ಸೆ.26 ರಂದು ಚಾಮರಾಜನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟ ► ದ.ಕ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿನಿಯರು

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸೆ.26 ರಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ ಶ್ರೀ ರಾಮಕುಂಜೇಶ್ವರ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ದ. ಕ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.


ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೊಗ್ರ ಗ್ರಾಮ ಅಂತರ ಮನೆ ನಿವಾಸಿ ಚಂದ್ರಶೇಖರ ಭಟ್ ಮತ್ತು ಸತ್ಯ ಕುಮಾರಿ ದಂಪತಿ ಪುತ್ರಿ ಅಕ್ಷತಾ ಪಿ ಸಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೆರಾಬೆ ಗ್ರಾಮ ಕೆಮ್ಮಿಂಜೆ ನಿವಾಸಿ ನಾರ್ಣಪ್ಪ ಗೌಡ ಮತ್ತು ಮೋಹಾನಂಗಿ ದಂಪತಿ ಪುತ್ರಿ ಲತಾ ಬಿ, ಪ್ರಥಮ ಪಿಯಸಿ ವಿದ್ಯಾರ್ಥಿನಿ ಆಲಂತಾಯ ಗ್ರಾಮ ಶಿವಾರು ನಿವಾಸಿ ಬಾಬು ನಾಯ್ಕ ಮತ್ತು ಬೇಬಿ ದಂಪತಿ ಪುತ್ರಿ ಚೇತನಾ ಎಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.

Also Read  ರಿಷಬ್ ಪಂತ್ ಸ್ಥಿತಿ ಗಂಭೀರ ➤ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್ ಗೆ ಏರ್ ಲಿಫ್ಟ್ ಸಾಧ್ಯತೆ

 

error: Content is protected !!
Scroll to Top