ಮೂಡಬಿದಿರೆ : ಗೋಕಳ್ಳರ ಮೇಲೆ ಇಂದು ಬೆಳ್ಳಂಬೇಳಗ್ಗೆ ಶೂಟೌಟ್

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಅ. 11: ಮೂಡಬಿದಿರೆಯಲ್ಲಿ ಅಕ್ರಮ ಗೋ ಕಳ್ಳರ ಮೇಲೆ ಪೊಲೀಸರು ಇಂದು ಬೆಳ್ಳಂಬೇಳಗ್ಗೆಯೇ ಶೂಟೌಟ್ ನಡೆಸಿದ್ದಾರೆ.

 

ಶಿರ್ತಾಡಿ ಭಾಗದಿಂದ ಅಕ್ರಮವಾಗಿ ಕಾರೊಂದರಲ್ಲಿ ಹಿಂಸಾತ್ಮಕವಾಗಿ ಆರು ದನಗಳನ್ನು ಕದ್ದು ಸಾಗಾಟ ಮಾಡುತ್ತಿದ್ದ ಖದೀಮರನ್ನು ಬೆನ್ನತ್ತಿ ಹೊರಟ ಮೂಡಬಿದಿರೆ ಸರ್ಕಲ್ ದಿನೇಶ್ ಕುಮಾರ್ ನೇತೃತ್ವದ ಪೊಲೀಸರ ತಂಡ ಹೌದಲ್ ಪ್ರದೇಶದಲ್ಲಿ ಕಳ್ಳರ ಮೇಲೆ ಶೂಟೌಟ್ ಮಾಡಿದ ಘಟನೆ ಇಂದು ನಡೆದಿದೆ. ಆದರೆ ಈ ವೇಳೆ ಕಳ್ಳರು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ. ಪೊಲೀಸರು ಆರು ದನಗಳನ್ನು ರಕ್ಷಿಸಿದ್ದಾರೆ. ಮೂಡಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಗೋಹತ್ಯೆ ಕಡಿವಾಣಕ್ಕೆ ಕೂಗು ➤ ಪೇಜಾವರ ಶ್ರೀಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ

 

error: Content is protected !!
Scroll to Top