(ನ್ಯೂಸ್ ಕಡಬ) newskadaba.com ಅರಂತೋಡು, ಅ. 11: ಚಾಲಕನ ನಿಯಂತ್ರಣ ತಪ್ಪಿದ್ದ ವಾಹನವೊಂದು ಚರಂಡಿಗೆ ಬಿದ್ದ ಘಟನೆ ನಡೆದಿದೆ. ಅರಂತೋಡು ಮರ್ಕಂಜ ರಸ್ತೆಯ ವೈ.ಎಂ.ಕೆ ಬಳಿ ಮಡಪ್ಪಾಡಿ ಗೆ ಹುಲ್ಲು ಹೇರಿಕೊಂಡು ಬರುತ್ತಿದ್ದ ವೇಳೆ ಈ ಘಟನೆ ಸಂಬವಿಸಿದೆ.
ಈಗಾಗಲೇ, ಈ ಸ್ಥಳದಲ್ಲಿ ಹಲವಾರು ವಾಹನಗಳು ಪಲ್ಟಿಯಾಗಿರುವ ಘಟನೆಗಳು ನಡೆದಿದೆ. ರಸ್ತೆ ಕಿರಿದಾಗಿದ್ದು ಲೋಡ್ ತುಂಬಿದ ವಾಹನ ಚಾಲನೆ ಮಾಡುವುದೆ ಒಂದು ಸಾಹಸವೇನಿಸುತ್ತದೆ.ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.