ಪುತ್ತೂರು: ಇತ್ತಂಡಗಳ ನಡುವೆ ಹೊಡೆದಾಟ; ಚೂರಿ ಇರಿತ ➤ ಇಬ್ಬರು ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 11. ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಇತ್ತಂಡಗಳು ಹೊಡೆದಾಡಿಕೊಂಡು ಇಬ್ಬರು ಗಾಯಗೊಂಡ ಘಟನೆ ದರ್ಬೆ ಸರ್ಕಲ್ ಬಳಿ ವರದಿಯಾಗಿದೆ.


ಗಾಯಾಳುಗಳನ್ನು ಚಿಕ್ಕಮುಡ್ನೂರು ನಿವಾಸಿ ವಿಖ್ಯಾತ್(23) ಹಾಗೂ ಬನ್ನೂರು ನಿವಾಸಿ ಶರತ್ ಎಂದು ಗುರುತಿಸಲಾಗಿದೆ. ದರ್ಬೆ ಬೈಪಾಸ್ ವೃತ್ತದ ಬಳಿ ಯುವಕರ ತಂಡಗಳು ಗುಂಪು ಸೇರಿ ಮಾತುಕತೆ ನಡೆಸುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಎರಡೂ ತಂಡಗಳ ನಡುವಿನ ಹೊಡೆದಾಟದಲ್ಲಿ ಚೂರಿ ಇರಿತ ಹಾಗೂ ಬಾಟಲ್ ನಿಂದ ಹಲ್ಲೆ ನಡೆದಿದ್ದು, ಗಾಯಗೊಂಡ ಇಬ್ಬರು ಯುವಕರಲ್ಲಿ ಓರ್ವ ಪುತ್ತೂರು ಸರ್ಕಾರಿ ಆಸ್ಪತ್ರೆ ಹಾಗೂ ಇನ್ನೋರ್ವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.

Also Read  ಕಡಬ: ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ ಓರ್ವನ ಬಂಧನ

ಅಕ್ಷಯ್ ಮತ್ತು ನರ್ಮೇಶ್ ಎಂಬವರ ತಂಡಗಳ ಮಧ್ಯೆ ಈ ಹೊಡೆದಾಟ ನಡೆದಿದ್ದು, ಉಳಿದವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಳಿಕ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

error: Content is protected !!
Scroll to Top